ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಬ್ಯಾಂಕ್ ನಲ್ಲಿ ಅಕೌಂಟ್ ಮಾಡಿಸಿರುವವರಿಗೆ ಅದರಲ್ಲಿ ಮುಖ್ಯವಾಗಿ ಕೆನರಾ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಹೆಚ್ ಡಿ ಎಫ್ ಸಿ ಅಥವಾ ಐಸಿಐಸಿಐ ಬ್ಯಾಂಕ್ ನಲ್ಲಿ ನಲ್ಲಿ ಅಕೌಂಟ್ ಹೊಂದಿರುವವರಿಗೆ ಸಿಹಿ ಸುದ್ದಿಯನ್ನು ತಿಳಿಸಲಾಗುತ್ತಿದೆ. ಈ ಎಲ್ಲಾ ಬ್ಯಾಂಕುಗಳಲ್ಲಿ ಗ್ರಾಹಕರು ಎಫ್ ಡಿ ಇಟ್ಟಿದ್ದಾರೆ ಆ ಎಫ್ ಡಿ ಎ ಮೇಲೆ ಬಡ್ಡಿದರ ಹೆಚ್ಚಳವಾಗಿದ್ದು ಇದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಲಿದ್ದಾರೆ.
ಫಿಕ್ಸೆಡ್ ಡೆಪಾಸಿಟ್ :
ಸಾಕಷ್ಟು ಜನರು ತಮ್ಮ ಹಣವನ್ನು ಉಳಿತಾಯ ಮಾಡಿ ಹೂಡಿಕೆ ಮಾಡಬೇಕೆಂದು ಯೋಚಿಸುತ್ತಿರುತ್ತಾರೆ ಅಂತಹ ಜನರಿಗೆ ಹೂಡಿಕೆ ಮಾಡಲು ಎಫ್ ಡಿ ಅನ್ನು ಬ್ಯಾಂಕ್ ನಲ್ಲಿ ಇಡುವುದು ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಬ್ಯಾಂಕ್ ನಲ್ಲಿ ಎಫ್ ಡಿ ಇಟ್ಟಂತಹ ಹುಡುಗಿಯ ಹಣ ಸುರಕ್ಷಿತವಾಗಿರುತ್ತದೆ ಅಲ್ಲದೆ ಉತ್ತಮವಾದ ಬಡ್ಡಿದರವನ್ನು ಕೂಡ ಇದಕ್ಕೆ ಪಡೆಯಬಹುದು.
ಹಾಗಾಗಿ ಸಾಕಷ್ಟು ಜನರು ಬ್ಯಾಂಕಿನ ಎಫ್ ಡಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ ಒಂದು ವೇಳೆ ನೀವು ಕೂಡ ಎಫ್ ಡಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ಪ್ಲಾನ್ ಮಾಡುತ್ತಿದ್ದಾರೆ ಇಂದು ಎಫ್ ಡಿ ಯೋಜನೆಗೆ ಸಂಬಂಧಿಸಿ ದಂತೆ ಸಿಹಿ ಸುದ್ದಿಯನ್ನು ತಿಳಿಸಲಾಗುತ್ತಿದೆ.
ಈ ಬ್ಯಾಂಕುಗಳಲ್ಲಿ ಎಫ್ ಡಿ ಮೇಲೆ ಬಡ್ಡಿದರ ಹೆಚ್ಚಳ :
ಸಾಕಷ್ಟು ಜನರು ತಾವು ಹೂಡಿಕೆ ಮಾಡಿದಂತಹ ಹಣಕ್ಕೆ ಉತ್ತಮವಾದ ಬಡ್ಡಿಯನ್ನು ಸಿಗುವ ಎಫ್ ಡಿ ಯೋಜನೆಯಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿರುತ್ತಾರೆ ಅಂತ ಅವರ ಬ್ಯಾಂಕ್ ಅಕೌಂಟ್ ಗಳು ಏನಾದರೂ ಎಚ್ಡಿಎಫ್ಸಿ ಅಥವಾ ಐಸಿಐಸಿಐ ಕೆನರಾ ಬ್ಯಾಂಕ್ sbi ನಲ್ಲಿ ಇದ್ದರೆ ಅಂತವರಿಗೆ ಸಿಹಿ ಸುದ್ದಿ ಎಂದು ಹೇಳಬಹುದು. ಸದ್ಯ ಇದೀಗ ಈ ಎಲ್ಲ ಬ್ಯಾಂಕುಗಳು ತನ್ನ ಎಫ್ ಡಿ ಮೇಲೆ ಇರುವಂತಹ ಬಡ್ಡಿಯ ದರವನ್ನು ಹೆಚ್ಚಳ ಮಾಡಿದೆ.
ಸಾಮಾನ್ಯ ಗ್ರಾಹಕರಿಗಿಂತ ಹಿರಿಯ ನಾಗರಿಕರಿಗೆ ಈ ಒಂದು ಯೋಜನೆಯಲ್ಲಿ ಹೆಚ್ಚು ಬಡ್ಡಿದರ ಸಿಗಲಿದ್ದು ಎಷ್ಟು ಬಡ್ಡಿ ಯಾವ ಬ್ಯಾಂಕುಗಳಲ್ಲಿ ಸಿಗುತ್ತದೆ ಎಂದು ನೋಡುವುದಾದರೆ,
SBI ಬಡ್ಡಿದರ :
ಭಾರತದಲ್ಲಿ ಅತಿ ದೊಡ್ಡ ಬ್ಯಾಂಕುಗಳಲ್ಲಿ ಒಂದಾಗಿರುವಂತಹ ಎಸ್ಬಿಐ ತನ್ನಲ್ಲಿ ಇರುವ ಎಫ್ ಡಿ ಹೂಡಿಕೆಯ ಮೇಲೆ 3.50 ರಿಂದ 7.10% ವರೆಗೆ ಬಡ್ಡಿ ದರವನ್ನು ಸಾಮಾನ್ಯ ಗ್ರಾಹಕರಿಗೆ ನೀಡಿದೆ ಇನ್ನೂ ಹಿರಿಯ ನಾಗರಿಕರಿಗೆ ನಾಲ್ಕರಿಂದ 7.60 ಪರ್ಸೆಂಟ್ ವರೆಗೆ ಬಡ್ಡಿದರವನ್ನು ನಿಗದಿಪಡಿಸಿದೆ. 400 ದಿನಗಳ ವಿಶೇಷ ಎಫ್ ಡಿ ಯೋಜನೆ ಪ್ರಸ್ತುತ ಎಸ್ ಬಿ ಐ ನಲ್ಲಿ ಇದ್ದು ಈ ಒಂದು ಯೋಜನೆಗೆ 7.10% ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ. ಗ್ರಾಹಕರು ಈ ಒಂದು ಯೋಜನೆಯಲ್ಲಿ 2024 ಸೆಪ್ಟೆಂಬರ್ 30ರ ಒಳಗಾಗಿ ಹೂಡಿಕೆ ಮಾಡಬಹುದು.
ICICI ಬ್ಯಾಂಕ್ ನ ಬಡ್ಡಿ ದರ :
ಐಸಿಐಸಿಐ ಬ್ಯಾಂಕ್ ಕೂಡ ನಮ್ಮ ದೇಶದ ಪ್ರಮುಖ ಬ್ಯಾಂಕುಗಳಲ್ಲಿ ಒಂದಾಗಿದ್ದು ಸಾಮಾನ್ಯ ಜನರಿಗೆ ಮೂರರಿಂದ 7.20% ವರೆಗೆ ಎಫ್ ಡಿ ಹೂಡಿಕೆಯ ಮೇಲೆ ಬಡ್ಡಿದರ ನೀಡಲಾಗುತ್ತದೆ. ಅದೇ ರೀತಿ ಹಿರಿಯ ನಾಗರಿಕರಿಗೆ 3.50 ಇಂದ 7.75% ವರೆಗೆ ಬಡ್ಡಿಯನ್ನು ನಿಗದಿಪಡಿಸಲಾಗಿದೆ.
HDFC ಬಡ್ಡಿದರ :
ಇನ್ನು ಬ್ಯಾಂಕುಗಳಲ್ಲಿ ಪ್ರೈವೇಟ್ ಸೆಕ್ಟರ್ ಗೆ ಬಂದರೆ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವಂತಹ ಬ್ಯಾಂಕ್ ಎಂದರೆ ಎಸ್ ಟಿ ಎಫ್ ಸಿ ಬ್ಯಾಂಕ್ ಆಗಿದೆ. ಈ ಒಂದು ಬ್ಯಾಂಕ್ ನಲ್ಲಿ ಸಾಮಾನ್ಯ ಜನರಿಗೆ ಎಫ್ಡಿ ಹೂಡಿಕೆಯ ಮೇಲೆ 3 ರಿಂದ 7.25% ವರೆಗೆ ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ.
18 ತಿಂಗಳು ಹೂಡಿಕೆಗೆ 7.25 ಪರ್ಸೆಂಟ್ ಹಾಗೂ 7.75% 21 ತಿಂಗಳ ಹೂಡಿಕೆಗೆ ಬಡ್ಡಿದರ ನಿಗದಿಪಡಿಸಲಾಗಿದೆ. ಎಫ್ ಡಿ ಹೂಡಿಕೆಯ ಮೇಲೆ 3.50 ರಿಂದ 7.75% ವರೆಗೆ ಹಿರಿಯ ನಾಗರಿಕರಿಗೆ ಬಡ್ಡಿದರ ಇರಲಿದೆ.
ಕೆನರಾ ಬ್ಯಾಂಕ್ :
ನಮ್ಮ ದೇಶದ ಮತ್ತೊಂದು ಪ್ರಮುಖ ಬ್ಯಾಂಕ್ ಎಂದರೆ ಅದು ಕೆನರಾ ಬ್ಯಾಂಕ್ ಆಗಿದೆ. ಕೆನರಾ ಬ್ಯಾಂಕ್ ನಲ್ಲಿ ಏಳು ದಿನಗಳಿಂದ 10 ವರ್ಷಗಳ ಒಳಗಿನ ಎಫ್ ಡಿ ಹೂಡಿಕೆಯ ಮೇಲೆ ನಾಲ್ಕರಿಂದ 7.25 ಪರ್ಸೆಂಟ್ ವರೆಗೆ ಸಾಮಾನ್ಯ ಜನರಿಗೆ ಬಡ್ಡಿದರ ಇರಲಿದೆ.
ನಾಲ್ಕರಿಂದ 7.75% ವರೆಗೆ ಹಿರಿಯ ನಾಗರಿಕರಿಗೆ fd ಹೂಡಿಕೆಯ ಮೇಲೆ ಬಡ್ಡಿದರ ನಿಗದಿಪಡಿಸಲಾಗಿದೆ. 7.25% ನಿಂದ 7.75% ವರೆಗೆ 44 ದಿನಗಳ ಎಫ್ ಡಿ ಹೂಡಿಕೆಯ ಮೇಲೆ ಬಡ್ಡಿದರ ನಿಗದಿಪಡಿಸಲಾಗಿದೆ.
ಹೀಗೆ ವಿವಿಧ ಬ್ಯಾಂಕುಗಳಲ್ಲಿ HDFC ಹೂಡಿಕೆಯ ಮೇಲೆ ಬಡ್ಡಿದರವನ್ನು ಹೆಚ್ಚಳ ಮಾಡಲಾಗಿದ್ದು ಎಫ್ ಡಿ ಇಡಲು ಗ್ರಾಹಕರು ಯೋಚಿಸುತ್ತಿದ್ದಾರೆ ಇದು ಉತ್ತಮ ಸಮಯ ಎಂದು ಹೇಳಬಹುದು. ಹಾಗಾಗಿ ಈ ಮೇಲಿನ ಬ್ಯಾಂಕುಗಳಲ್ಲಿ ಯಾರಾದರೂ ಎಫ್ ಡಿ ಇಡಲು ಯೋಚಿಸುತ್ತಿದ್ದರೆ ಹೆಚ್ಚಿನ ಬಡ್ಡಿ ದರವನ್ನು ಇದರಲ್ಲಿ ಪಡೆಯಬಹುದೆಂದು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು ;
- ಸರ್ಕಾರದಿಂದ BPL ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ : ಶೀಘ್ರದಲ್ಲೇ ಸಿಗಲಿದೆ ಹೊಸ ಕಾರ್ಡ್
- 10,000 ಪ್ರತಿ ತಿಂಗಳು ಸಿಗಲಿದೆ : ಮೋದಿ ಸರ್ಕಾರದ ಯೋಜನೆ ಒಮ್ಮೆ ಗಮನಿಸಿ ಇಲ್ಲಿದೆ ಮಾಹಿತಿ