ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಬಿಎಂಟಿಸಿ ವತಿಯಿಂದ ಅರ್ಜಿಯನ್ನು ಆಹ್ವಾನ ಮಾಡಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ವಾಹನವನ್ನು ಚಲಾವಣೆ ಮಾಡಬೇಕೆಂದರೆ ಡ್ರೈವಿಂಗ್ ಅನ್ನು ಕಲಿಯಬೇಕೆಂಬ ಆಸೆ ಎಲ್ಲರಲ್ಲಿ ಇದ್ದೇ ಇರುತ್ತದೆ.
ಏಕೆಂದರೆ ಪ್ರತಿಯೊಬ್ಬರೂ ಕೂಡ ಇತ್ತೀಚಿನ ದಿನಗಳಲ್ಲಿ ಕಾರು ಖರೀದಿಸಿ ಆ ಕಾರನ್ನು ಡ್ರೈವಿಂಗ್ ಮಾಡಬೇಕೆಂಬ ಆಸೆಯನ್ನು ಹೊಂದಿರುತ್ತಾರೆ ಆದರೆ ಸಾಕಷ್ಟು ಜನರಿಗೆ ವಾಹನ ಸಿಗದೇ ಡ್ರೈವಿಂಗ್ ಕಲಿಯಲು ಮತ್ತು ಯಾವುದೇ ತರಬೇತಿಯು ಕೂಡ ಇಲ್ಲದೆ ಇರುವುದರಿಂದ ಅವರು ಡ್ರೈವಿಂಗ್ ಕಲಿತಿರುವುದಿಲ್ಲ. ಹಾಗಾಗಿ ಇದೀಗ ಅಂತಹ ಅಭ್ಯರ್ಥಿಗಳಿಗೆ ಸರ್ಕಾರದಿಂದ ಒಂದು ಯೋಜನೆಯನ್ನು ಜಾರಿ ಮಾಡಲಾಗಿದೆ.
ಉಚಿತ ಡ್ರೈವಿಂಗ್ ತರಬೇತಿ :
ಡ್ರೈವಿಂಗ್ ಕಲಿಯಬೇಕೆಂಬ ಆಸೆಯನ್ನು ಹೊಂದಿರುವಂತಹ ಅಭ್ಯರ್ಥಿಗಳಿಗೆ ಸರ್ಕಾರದಿಂದ ಉಚಿತವಾಗಿ ಡ್ರೈವಿಂಗ್ ತರಬೇತಿಯನ್ನು ನೀಡುವಂತಹ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಉಚಿತ ಡ್ರೈವಿಂಗ್ ತರಬೇತಿಯನ್ನು ಡ್ರೈವಿಂಗ್ ಕಲಿಯುವರಿಗಾಗಿ ನೀಡಲಾಗುತ್ತಿದ್ದು ಆಸಕ್ತಿ ಹೊಂದಿರುವ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಬಿಎಂಟಿಸಿ ವತಿಯಿಂದ ಆಹ್ವಾನಿಸಲಾಗಿದೆ.
ಅರ್ಜಿಯನ್ನು ಸಲ್ಲಿಸುವವರು ಈ ಕೆಳಗಿನ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಆನಂತರ ತರಬೇತಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಸಾರಿಗೆ ಇಲಾಖೆ ತರಬೇತಿ :
ಸದ್ಯ ಇದೀಗ ಸಾರಿಗೆ ಇಲಾಖೆಯು ಖಾಸಗಿ ಡ್ರೈವಿಂಗ್ ಸ್ಕೂಲ್ ಗಳಿಗೆ ಸೆಡ್ಡು ಹೊಡೆಯಲು ಬಿಎಂಟಿಸಿಯಿಂದ ಯುವಕ ಯುವತಿಯರಿಗೆ ಬಸ್ಸು ಹಾಗೂ ಕಾರಿನ ಡ್ರೈವಿಂಗ್ ಕ್ಲಾಸ್ ಅನ್ನು ಉಚಿತವಾಗಿ ನಡೆಸಲು ಮುಂದಾಗಿದ್ದು ಕಾರು ಬಸ್ ಡ್ರೈವಿಂಗ್ ತರಬೇತಿಯನ್ನು 30 ದಿನಗಳವರೆಗೆ ಉಚಿತವಾಗಿ ನೀಡಲಾಗುತ್ತದೆ. ಈ ಕ್ಲಾಸ್ ಬೆಂಗಳೂರಿನ ವಡ್ಡರಹಳ್ಳಿಯ 22 ಎಕರೆ ಪ್ರದೇಶದಲ್ಲಿ ನಡೆಯಲಿದ್ದು ಉಚಿತವಾಗಿ ಊಟ ವಸತಿ ವ್ಯವಸ್ಥೆಯನ್ನು ಕೂಡ ಬೇರೆ ಊರಿನಿಂದ ಬರುವವರಿಗೆ ಮಾಡಲಾಗಿದೆ.
ಉಚಿತವಾಗಿ ಡ್ರೈವಿಂಗ್ ಲೈಸೆನ್ಸ್ ಅನ್ನು ಕೂಡ 30 ದಿನ ತರಬೇತಿ ಮುಗಿದ ನಂತರ ಮಾಡಿಸಿ ಕೊಡಲಾಗುತ್ತದೆ. ಡ್ರೈವಿಂಗ್ ತರಬೇತಿ ದಿನದಿಂದ ದಿನಕ್ಕೆ ಬೆಂಗಳೂರಿನಲ್ಲಿ ದುಬಾರಿಯಾಗುತ್ತಿದ್ದು ಕಾರು ಹಾಗೂ ಬಸ್ ಚಾಲನೆಯ ಮೇಲೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಡ್ರೈವಿಂಗ್ ಕ್ಲಾಸ್ನ ದುಬಾರಿ ಶುಲ್ಕಕ್ಕೆ ಬೇಸತ್ತು ಹೋಗುತ್ತಿಲ್ಲ ಇಂಥವರಿಗಾಗಿ ಬಿಎಂಟಿಸಿ ಸುವರ್ಣ ಅವಕಾಶ ನೀಡಿದ್ದು ಚಾಲಕ ವೃತ್ತಿಯ ಮೇಲೆ ಆಸಕ್ತಿ ಹೊಂದಿರುವಂತಹ ಯುವಕ ಯುವತಿಯರು ಬಿಎಂಟಿಸಿ ಉಚಿತ ತರಬೇತಿ ನೀಡುತ್ತಿದ್ದು ಈ ತರಬೇತಿಗೆ ಅರ್ಜಿಯನ್ನು ಸಲ್ಲಿಸಿ ಉಚಿತವಾಗಿ ತರಬೇತಿಯನ್ನು ಪಡೆದುಕೊಳ್ಳಬಹುದಾಗಿದೆ.
ಬೆಂಗಳೂರಿನ ವಡ್ಡರಹಳ್ಳಿಯಲ್ಲಿ ತರಬೇತಿ :
ಆಸಕ್ತಿ ಹೊಂದಿರುವಂತಹ ಯುವಕ ಯುವತಿಯರಿಗಾಗಿ ಬಿಎಂಟಿಸಿಯಿಂದ 30 ದಿನಗಳವರೆಗೆ ಉಚಿತ ಬಸ್ಸು ಹಾಗೂ ಕಾರಿನ ಡ್ರೈವಿಂಗ್ ತರಬೇತಿ ನಡೆಸಲು ಮುಂದಾಗಿದ್ದು 30 ದಿನಗಳವರೆಗೆ ತರಬೇತಿ ಮುಗಿದ ನಂತರ ಅಲ್ಲಿಯೇ ಕಲಿಕೆ ಅನುಗುಣವಾಗಿ ಪರೀಕ್ಷೆ ನಡೆಸಿ ಉಚಿತವಾಗಿ ಡ್ರೈವಿಂಗ್ ಲೈಸೆನ್ಸ್ ಅನ್ನು ಕೂಡ ಬಿಎಂಟಿಸಿ ಯಿಂದಲೇ ಮಾಡಿಸಿ ಕೊಡುವುದಾಗಿ ಬಿಎಂಟಿಸಿ ಅಧಿಕಾರಿಗಳು ಯುವಕ ಯುವತಿಯರಿಗೆ ತಿಳಿಸಿದ್ದಾರೆ. ಉಚಿತ ಬಸ್ಸು ಹಾಗೂ ಕಾರಿನ ತರಬೇತಿ ಬೆಂಗಳೂರಿನ ವಡ್ಡರಹಳ್ಳಿಯ 22 ಎಕರೆ ಪ್ರದೇಶದಲ್ಲಿ ನಡೆಸಲಾಗುತ್ತಿದ್ದು ಪ್ರತ್ಯೇಕ ವ್ಯವಸ್ಥೆಯನ್ನು ಯುವತಿಯರಿಗೆ ಚಾಲನೆ ತರಬೇತಿಗಾಗಿ ಇರಲಿದೆ.
ಡ್ರೈವಿಂಗ್ ತರಬೇತಿ ಬಡ ಹಾಗೂ ಮಧ್ಯಮ ವರ್ಗದ ಯುವಜನತೆ ಪಡೆಯುವ ದೃಷ್ಟಿಯಿಂದ ಈ ನೂತನ ಹೆಜ್ಜೆಯನ್ನು ಸಾರಿಗೆ ಇಲಾಖೆ ಇಡುತ್ತಿದೆ. ಬಿಪಿಎಲ್ ಕಾರ್ಡ್ ಹೊಂದಿರುವಂತಹ ಯುವಕ ಯುವತಿಯರೂ ತರಬೇತಿಯನ್ನು ಪಡೆಯಬಹುದು.
ಬೇರೆ ಊರಿನಿಂದ ಬಂದು ಬೆಂಗಳೂರಿಗೆ ಈ ತರಬೇತಿಯನ್ನು ಪಡೆಯುವವರಿಗೆ ಊಟ ವಸತಿ ವ್ಯವಸ್ಥೆಯನ್ನು ಬಿಎಂಟಿಸಿ ಸಂಸ್ಥೆ ವತಿಯಿಂದಲೇ ಇರಲಿದ್ದು 25 ವರ್ಷಗಳ ಅನುಭವ ಇರುವಂತಹ ಗೋಲ್ಡ್ ಮತ್ತು ಸಿಲ್ವರ್ ಮೆಡಲ್ ಪಡೆದಿರುವಂತಹ ಮಹಿಳಾ ಮತ್ತು ಪುರುಷ ಚಾಲಕರು ಬಿಎಂಟಿಸಿಯಲ್ಲಿ ಯುವಕ ಯುವತಿಯರಿಗೆ ಡ್ರೈವಿಂಗ್ ತರಬೇತಿಯನ್ನು ತೆಗೆದುಕೊಳ್ಳುತ್ತಾರೆ. ಈ ತರಬೇತಿ 30 ದಿನಗಳವರೆಗೆ ನಡೆದು ತರಬೇತಿ ಮುಗಿದ ನಂತರ ನೆಲಮಂಗಲ ಆರ್ ಟಿ ಓ ದಲ್ಲಿ ಡಿಎಲ್ ಅನ್ನು ಪರೀಕ್ಷೆಯ ನಂತರ ಅಭ್ಯರ್ಥಿಗಳಿಗೆ ನೀಡಲಾಗುತ್ತದೆ.
ಇದನ್ನು ಓದಿ : CBIC ನೇಮಕಾತಿ : ಅರ್ಜಿ ಸಲ್ಲಿಸಲು ಇಲ್ಲಿದೆ ಡೈರೆಕ್ಟ್ ಲಿಂಕ್
ಉಚಿತ ಡ್ರೈವಿಂಗ್ ತರಬೇತಿ ಪಡೆಯಲು ಏನು ಮಾಡಬೇಕು ?
ಬಿಎಂಟಿಸಿ ನಡೆಸುತ್ತಿರುವಂತಹ ಈ ಉಚಿತ ತರಬೇತಿಗೆ ಸೇರಲು ಶಾಂತಿನಗರದ ಬಿಎಂಟಿಸಿ ಮುಖ್ಯ ಕಚೇರಿಯಲ್ಲಿ ಯುವಕ ಯುವತಿಯರು ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ ವಿಳಾಸ ಹಾಗೂ ಮಾಹಿತಿಯೊಂದಿಗೆ ಯುವಕ ಯುವತಿಯರು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಮುಂದಿನ ಮಾಹಿತಿಅನ್ನು ಬಿಎಂಟಿಸಿ ಅಧಿಕಾರಿಗಳು ಸಂಪರ್ಕಿಸಿ ನೀಡುತ್ತಾರೆ. 970 ಯುವಕ ಯುವತಿಯರಿಗೆ 2023 ಮತ್ತು 24ನೇ ಸಾಲಿನಲ್ಲಿ ಡ್ರೈವಿಂಗ್ ತರಬೇತಿಯನ್ನು ನೀಡಲು ಸಾರಿಗೆ ಇಲಾಖೆಯು ಅನುಮತಿ ತಿಳಿಸಿದ್ದು 104 ಮಂದಿ ಈಗಾಗಲೇ ಮೊದಲ ಬ್ಯಾಚ್ ನಲ್ಲಿ ಜನವರಿಯಲ್ಲಿ ಉಚಿತ ತರಬೇತಿಯನ್ನು ಪಡೆದು ಡಿಎಲ್ ಅನ್ನು ಪಡೆದುಕೊಂಡಿದ್ದಾರೆ.
ಸದ್ಯ ಇದೀಗ ಬೆಂಗಳೂರಿನಲ್ಲಿ ಎರಡನೇ ಬ್ಯಾಚ್ನಲ್ಲಿ 34 ಜನರು ತರಬೇತಿ ಪಡೆಯುತ್ತಿದ್ದು ಮುಂದಿನ ಬ್ಯಾಚಿಗೆ ಸೇರಬೇಕೆಂದು ಕೊಂಡವರು ಈ ಕೂಡಲೇ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಡ್ರೈವಿಂಗ್ ತರಬೇತಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :
ಬಿಎಂಟಿಸಿ ನಡೆಸುತ್ತಿರುವಂತಹ ಉಚಿತ ಡ್ರೈವಿಂಗ್ ತರಬೇತಿಗೆ ಅರ್ಜಿಯನ್ನು ಸಲ್ಲಿಸಲು ಯುವಕ ಯುವತಿಯರು ಈ ಕೆಳಗಿನ ಪ್ರಮುಖ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ.
- ಜನ್ಮ ದಿನಾಂಕದ ಬಗ್ಗೆ ಜನನ ಪ್ರಮಾಣ ಪತ್ರ.
- ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್.
- ಶಾಲಾ ವರ್ಗಾವಣೆ ಪತ್ರ.
- ನೋಟರಿಯಿಂದ ಪ್ರಮಾಣ ಪತ್ರ.
- ಆಧಾರ್ ಕಾರ್ಡ್.
- ಜಾತಿ ಪ್ರಮಾಣ ಪತ್ರ.
- ಆದಾಯ ಪ್ರಮಾಣ ಪತ್ರ.
- ಪಾಸ್ಪೋರ್ಟ್ ಸೈಜ್ ಫೋಟೋ.
ಹೀಗೆ ಮೇಲಿನ ಎಲ್ಲಾ ಅಗತ್ಯ ದಾಖಲೆಗಳನ್ನು ಹೊಂದುವುದರ ಮೂಲಕ ಶಾಂತಿನಗರದ ಬಿಎಂಟಿಸಿ ಯ ಮುಖ್ಯ ಕಚೇರಿಯಲ್ಲಿ ಯುವಕ ಯುವತಿಯರೋ ಬಿಎಂಟಿಸಿ ತರಬೇತಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಒಟ್ಟಾರೆ ಡ್ರೈವಿಂಗ್ ಕಲಿಯಬೇಕೆಂಬ ಆಸೆಯನ್ನು ಹೊಂದಿರುವ ಯುವಕ ಯುವತಿಯರು ಬಿಎಂಟಿಸಿ ನೀಡುತ್ತಿರುವಂತಹ ಉಚಿತ ಡ್ರೈವಿಂಗ್ ಕ್ಲಾಸ್ ಗೆ ಹೋಗುವುದರ ಮೂಲಕ ಸರ್ಕಾರದಿಂದಲೇ ಡ್ರೈವಿಂಗ್ ತರಬೇತಿಯನ್ನು ಪಡೆದುಕೊಳ್ಳಬಹುದಾಗಿದೆ.
KSRTC ಗೋ ಅಥವಾ BMTC ಯಾವುದಾದರೂ ಒಂದು ಇಲಾಖೆಗೆ ಡ್ರೈವಿಂಗ್ ಕುರಿತಂತೆ ಅಪ್ಲಿಕೇಶನ್ ಹಾಕಿ ಡ್ರೈವಿಂಗ್ ಕೆಲಸವನ್ನು ಪಡೆದುಕೊಳ್ಳಲು ಇದೊಂದು ಉತ್ತಮ ಅವಕಾಶವೆಂದು ಹೇಳಬಹುದು.
ಹಾಗಾಗಿ ನಿಮಗೆ ತಿಳಿದಿರುವ ಪ್ರತಿಯೊಬ್ಬರಿಗೂ ಬಿಎಂಟಿಸಿ ನೀಡುತ್ತಿರುವಂತಹ ಉಚಿತ ಡ್ರೈವಿಂಗ್ ತರಬೇತಿಯ ಬಗ್ಗೆ ಶೇರ್ ಮಾಡುವ ಮೂಲಕ ಅವರು ಕೂಡಉಚಿತವಾಗಿ ಡ್ರೈವಿಂಗ್ ತರಬೇತಿ ಪಡೆದುಕೊಳ್ಳಲು ಸಹಾಯವಾಗುತ್ತದೆ ಧನ್ಯವಾದಗಳು.
ಇತರೆ ವಿಷಯಗಳು :
- ರಾಜ್ಯ ವಿಮ ನಿಗಮ ಕರ್ನಾಟಕದಲ್ಲಿ ಖಾಲಿ ಹುದ್ದೆಗಳಿಗೆ ನೇಮಕಾತಿ – 2024
- ಉಚಿತ ಹೊಲಿಗೆ ಯಂತ್ರ : ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಬಂಪರ್ ಆಫರ್