ಉಚಿತ ಹೊಲಿಗೆ ಯಂತ್ರ : ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಬಂಪರ್ ಆಫರ್

ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳೆರಡು ಕೂಡ ಮಹಿಳೆಯರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತೇವೆ. ಸದ್ಯ ಇದೀಗ ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಒಂದು ಭರ್ಜರಿ ಯೋಜನೆಯನ್ನು ಜಾರಿಗೆ ತಂದಿದೆ. ಆ ಯೋಜನೆ ಎಂದರೆ ಅದು ಉಚಿತ ಹೊಲಿಗೆ ಯಂತ್ರ ವಿತರಣೆ ಯೋಜನೆಯಾಗಿದ್ದು ಈ ಯೋಜನೆಯ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿ ಒಂದು ಹೊಲಿಗೆ ಯಂತ್ರವನ್ನು ಉಚಿತವಾಗಿ ಮಹಿಳೆಯರು ಪಡೆದುಕೊಳ್ಳಬಹುದಾಗಿದೆ.

Free sewing machine for women
Free sewing machine for women

ಹಾಗಾದರೆ ಈ ಉಚಿತ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಲು ಹೇಗೆ ಅರ್ಜಿ ಸಲ್ಲಿಸಬೇಕು ಏನೆಲ್ಲ ದಾಖಲೆಗಳನ್ನು ಹೊಂದಿರಬೇಕು ಅರ್ಹತೆಗಳೇನು? ಅರ್ಜಿ ಸಲ್ಲಿಸುವ ವಿಧಾನವೇನು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಮಹಿಳೆಯರು ತಿಳಿದುಕೊಳ್ಳಬಹುದು.

ಕೇಂದ್ರದಿಂದ ಉಚಿತ ಹೊಲಿಗೆ ಯಂತ್ರ ವಿತರಣೆ :

ಉಚಿತ ಹೊಲಿಗೆ ಯಂತ್ರ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಸ್ವಂತ ಉದ್ಯೋಗವನ್ನು ಮಹಿಳೆಯರು ಮಾಡಲಿ ಎಂಬ ಉದ್ದೇಶದಿಂದ ಹಾಗೂ ದುಡಿಮೆ ಮಾಡಲಿ ಎನ್ನುವ ಉದ್ದೇಶದಿಂದ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತೇವೆ. ಅದರಲ್ಲಿ ಇದೀಗ ಮಹಿಳೆಯರಿಗಾಗಿ ಜಾರಿಗೆ ತಂದಿರುವ ಉಚಿತ ಹೊಲಿಗೆ ಯಂತ್ರ ಯೋಜನೆ ಯಾಗಿದೆ.

ಆರ್ಥಿಕವಾಗಿ ಮಹಿಳೆಯರು ಸಬಲರಾಗಿರಬೇಕು ಯಾರ ಮೇಲೂ ಅವರು ಅವಲಂಬಿತರಾಗಿರಬಾರದು, ತಮ್ಮ ಮನೆಯಿಂದಲೇ ತಮ್ಮ ಕೆಲಸವನ್ನು ಶುರು ಮಾಡಿ ಉತ್ತಮ ಆದಾಯವನ್ನು ಗಳಿಸಿ ಮನೆಯನ್ನು ನೋಡಿಕೊಳ್ಳಲು ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ.

ಮಹಿಳೆಯರು ಮನೆಯಿಂದ ಬಟ್ಟೆ ಹೊಲೆಯುವಂತಹ ಸ್ವಂತ ಉದ್ಯೋಗವನ್ನು ಪ್ರಾರಂಭ ಮಾಡಬಹುದಾಗಿದ್ದು ಇದಕ್ಕಾಗಿ ಅವರೆನಾದರೂ ತರಬೇತಿ ಪಡೆದುಕೊಳ್ಳಬೇಕೆಂದರೆ ಈ ತರಬೇತಿಯನ್ನು ಕೂಡ ಸರ್ಕಾರದ ಕಡೆಯಿಂದಲೇ ನೀಡಲಾಗುತ್ತದೆ. ಹಾಗಾಗಿ ಈ ಯೋಜನೆಗೆ ಮಹಿಳೆಯರು ಅರ್ಜಿಯನ್ನು ಸಲ್ಲಿಸಿ ರಾಜ್ಯ ಸರ್ಕಾರದಿಂದ ಸ್ವಂತ ಉದ್ಯೋಗವನ್ನು ಪ್ರಾರಂಭಿಸಬಹುದಾಗಿದೆ.

ಇದನ್ನು ಓದಿ : ನ್ಯಾಷನಲ್ ಹೌಸಿಂಗ್ ಬ್ಯಾಂಕ್ ನೇಮಕಾತಿ : 48 ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಹಾಯಧನ ಲಭ್ಯ :

ಉಚಿತ ಹೊಲಿಗೆ ಯಂತ್ರವನ್ನು ಖರೀದಿ ಮಾಡಲು ಮಹಿಳೆಯರಿಗೆ ಹದಿನೈದು ಸಾವಿರ ರೂಪಾಯಿಗಳವರೆಗೆ ಸಹಾಯಧನವನ್ನು ಸರ್ಕಾರವು ನೀಡುತ್ತದೆ. 50,000 ಹೊಲಿಗೆ ಯಂತ್ರಗಳನ್ನು ಎಲ್ಲ ರಾಜ್ಯದಲ್ಲಿ ವಿತರಣೆ ಮಾಡಬೇಕೆಂದು ನಿರ್ಧಾರವನ್ನು ಕೇಂದ್ರ ಸರ್ಕಾರ ಮಾಡಿದೆ ಹಾಗಾಗಿ ಈ ಯೋಜನೆ ಬಗ್ಗೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದು.

ಇದಷ್ಟೇ ಅಲ್ಲದೆ ನೀವೇನಾದರೂ ಈ ಕ್ಷೇತ್ರದಲ್ಲಿ ಸ್ವಂತ ಉದ್ಯಮವನ್ನು ಶುರು ಮಾಡಬೇಕೆಂದು ಬಯಸಿದರೆ ಸರ್ಕಾರದ ಕಡೆಯಿಂದ 50,000ಗಳ ಸಾಲ ಸೌಲಭ್ಯವನ್ನು ಕೂಡ ಈ ಯೋಜನೆಯ ಅಡಿಯಲ್ಲಿ ಪಡೆದುಕೊಳ್ಳಬಹುದಾಗಿದೆ.

ಉಚಿತ ಹೊಲಿಗೆ ಯಂತ್ರ ಯೋಜನೆಗೆ ಬೇಕಾಗುವ ದಾಖಲೆಗಳು :

ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತಹ ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ ಮಹಿಳೆಯರು ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕಾಗಿರುತ್ತದೆ. ಆ ಅಗತ್ಯ ದಾಖಲೆಗಳು ಯಾವುವು ಎಂದು ನೋಡುವುದಾದರೆ,

  1. ಆಕ್ಟಿವ್ ಆಗಿರುವಂತಹ ಬ್ಯಾಂಕ್ ಅಕೌಂಟ್ ಡೀಟೇಲ್ಸ್.
  2. ಮಹಿಳೆಯರ ಆಧಾರ್ ಕಾರ್ಡ್.
  3. ರೇಷನ್ ಕಾರ್ಡ್.
  4. ಆದಾಯ ಪ್ರಮಾಣ ಪತ್ರ.
  5. ಜಾತಿ ಪ್ರಮಾಣ ಪತ್ರ.
  6. ಬ್ಯಾಂಕ್ ಪಾಸ್ ಬುಕ್.
  7. ವಿಳಾಸ ಪ್ರಮಾಣ ಪತ್ರ.

ಅರ್ಹತೆಗಳು :

ಉಚಿತ ಹೊಲಿಗೆ ಯಂತ್ರ ಯೋಜನೆಗೆ ಮಹಿಳೆಯರು ಅರ್ಜಿಯನ್ನು ಸಲ್ಲಿಸಲು ಈ ಯೋಜನೆ ಅನುಸಾರವಾಗಿ ಉಚಿತ ಹೊಲಿಗೆ ಯಂತ್ರ ವಿತರಣೆ ಮಾಡಲು ಸರ್ಕಾರವು ಹಣಕಾಸಿನ ವಿಚಾರದಲ್ಲಿ ಕಷ್ಟದಲ್ಲಿ ಇರುವಂತಹ ಮಹಿಳೆಯರಿಗೆ ಆರ್ಥಿಕ ಸಹಾಯ ಮಾಡಬೇಕೆಂದು ಕೆಲವೊಂದು ಅರ್ಹತೆಗಳನ್ನು ತಿಳಿಸಿದ್ದು ಆ ಅರ್ಹತೆಗಳು ಯಾವುವು ಎಂದು ನೋಡುವುದಾದರೆ,

  1. ಉಚಿತ ಹೊಲಿಗೆ ಎಂದರೆ ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ಮಹಿಳೆಯರು ಭಾರತದ ಪ್ರಜೆಯಾಗಿರಬೇಕು. ಅಂದರೆ ಭಾರತದ ಮಹಿಳೆಯ ಆಗಿರಬೇಕು
  2. ಕುಟುಂಬದ ವಾರ್ಷಿಕ ಆದಾಯವು ಕಡಿಮೆ ಇರಬೇಕಾಗುತ್ತದೆ
  3. ಈಗಾಗಲೇ ಮಹಿಳೆಯರು ಹೊಲಿಗೆ ಕೆಲಸವನ್ನು ತಿಳಿದುಕೊಂಡಿರಬೇಕು.

ಅರ್ಜಿ ಸಲ್ಲಿಸುವ ಪ್ರಕ್ರಿಯೆ :

ಕೇಂದ್ರ ಸರ್ಕಾರವು ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣ ಗೊಳಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಉಚಿತ ಹೊಲಿಗೆ ಯಂತ್ರವನ್ನು ಜಾರಿಗೆ ತಂದಿದ್ದು ಈ ಯೋಜನೆಯ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿ ಸರ್ಕಾರದಿಂದ ಉಚಿತವಾಗಿ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಬಹುದಾಗಿದೆ.

ಅಭ್ಯರ್ಥಿಗಳು ಮೊದಲು ಅರ್ಜಿಯನ್ನು ಸಲ್ಲಿಸಲು ಆನ್ಲೈನ್ ಮೂಲಕ ಅವಕಾಶ ಕಲ್ಪಿಸಲಾಗಿದ್ದು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. https://pmvishwakarma.gov.in/ಈ ವೆಬ್ ಸೈಟ್ ಗೆ ಭೇಟಿ ನೀಡುವುದರ ಮೂಲಕ ಸುಲಭವಾಗಿ ಪ್ರಧಾನಮಂತ್ರಿ ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಿ ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಬಹುದು.

ಒಟ್ಟಾರೆ ಕೇಂದ್ರ ಸರ್ಕಾರವು ಮಹಿಳೆಯರು ಆರ್ಥಿಕವಾಗಿ ಸಬಲೀಕರಣವಾಗಬೇಕೆನ್ನುವ ಉದ್ದೇಶದಿಂದ ಅವರು ಯಾವುದೇ ರೀತಿಯ ಹಾಗೂ ಯಾರ ಮೇಲಿಯೂ ಅವಲಂಬಿತರಾಗಬಾರದು ಎನ್ನುವ ಉದ್ದೇಶದಿಂದ ಉಚಿತ ಹೊಲಿಗೆ ಯಂತ್ರವನ್ನು ವಿತರಣೆ ಮಾಡುತ್ತಿದ್ದು ಈ ಉಚಿತ ಹೊಲಿಗೆ ಯಂತ್ರದಿಂದ ಸಾಕಷ್ಟು ಮಹಿಳೆಯರಿಗೆ ಉಪಯೋಗವಾಗಲಿದೆ ಎಂದು ಹೇಳಬಹುದು.

ಈ ಉಚಿತ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಲು ಮೊದಲು ಟೈಲರಿಂಗ್ ಗೊತ್ತಿರಬೇಕಾಗುತ್ತದೆ. ಹಾಗಾಗಿ ಸರ್ಕಾರದಿಂದ ನೀಡಲಾಗುತ್ತಿರುವ ಉಚಿತ ಹೊಲಿಗೆ ಯಂತ್ರ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ನಿಮಗೆ ತಿಳಿದಿರುವ ಟೈಲರಿಂಗ್ ಮಹಿಳೆಯರಿಗೆ ಶೇರ್ ಮಾಡುವ ಮೂಲಕ ಅವರು ಈ ಯೋಜನೆಯ ಪ್ರಯೋಜನವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ಹೇಳಿ ಧನ್ಯವಾದಗಳು.

ಇತರೆ ವಿಷಯಗಳು :

Leave a Reply

Your email address will not be published. Required fields are marked *

rtgh