ನಮಸ್ಕಾರ ಸ್ನೇಹಿತರೇ ಸರ್ಕಾರವು ಯುವಕರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಸಜಯ್ದಿಗ ಯುವಕರಿಗೆ ಅನುಕೂಲವಾಗುವಂತಹ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಮೂಲಕ ಅವಿವಾಹಿತ ಯುವಕರು ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.
ಹಾಗಾದರೆ ಯುವಕರಿಗಾಗಿ ಜಾರಿಗೆ ತಂದಿರುವಂತಹ ಆ ಒಂದು ಯೋಜನೆ ಯಾವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳಬಹುದು.
ಜೀವನ ಸಂಗಮ ಪೋರ್ಟಲ್ :
ಅವಿವಾಹಿತ ಯುವಕರಿಗೆ ಇದೀಗ ಉತ್ತರ ಕನ್ನಡದಲ್ಲಿ ಒಂದು ಹೊಸ ಪೋರ್ಟಲನ್ನು ಪ್ರಾರಂಭಿಸಲಾಗಿದೆ. ಜೀವನ ಸಂಗಮ ಎನ್ನುವಂತಹ ಒಂದು ಪೋರ್ಟಲ್ ಅನ್ನು ಉತ್ತರ ಕನ್ನಡದಲ್ಲಿ ಪ್ರಾರಂಭಿಸಿದ್ದು ಇದೊಂದು ಅವಿವಾಹಿತ ಯುವಕರಿಗೆ ಶುಭ ಸುದ್ದಿ ಎಂದು ಹೇಳಬಹುದು. ಈ ಪೋರ್ಟಲ್ ನ ಮೂಲಕ ಒಂದು ಜೀವನ ಸಂಗಾತಿಯನ್ನು ಪಡೆದುಕೊಳ್ಳಬಹುದಾಗಿದೆ.
ಮದುವೆ ಎನ್ನುವುದು ಕೇವಲ ಸಮಾರಂಭ ಮಾತ್ರವಲ್ಲದೆ ತನ್ನ ಕಷ್ಟ ಸುಖಗಳಿಗೆ ಆಗಬಲ್ಲಂತಹ ಜೀವನ ಸಂಗಾತಿ ಸಿಗುವಂತಹ ಒಂದು ಅದ್ಭುತ ಕ್ಷಣ ಎಂದು ಹೇಳಿದರೆ ತಪ್ಪಾಗಲಾರದು. ಆದರೆ ಇಂದು ಮದುವೆಯಾದರು ಕೂಡ ಸಾಕಷ್ಟು ಕಾರಣಗಳಿಂದಾಗಿ ಮದುವೆಯಾದಂತಹ ದಂಪತಿಗಳು ಡೈವೋರ್ಸ್ ಪಡೆದು ಬೇರ್ಪಡುತ್ತಿದ್ದಾರೆ ಇದಕ್ಕೆ ಹಲವಾರು ಕಾರಣಗಳು ಇದ್ದರೆ ಮದುವೆಯಾಗಲು ಯುವಕರಿಗೆ ಹುಡುಗಿಯೇ ಸಿಗುತ್ತಿಲ್ಲ. ಇತ್ತೀಚಿಗೆ ನಡೆದಂತಹ ಜನಸ್ಪಂದನ ಕಾರ್ಯಕ್ರಮದಲ್ಲಿ ಯುವ ರೈತರು ಒಬ್ಬರು ಮದುವೆಯಾಗಲು ಕನ್ಯೆ ಹುಡುಕಿ ಕೊಡುವಂತೆ, ಅರ್ಜಿ ಸಲ್ಲಿಸಿದ್ದ ವಿಷಯ ಬಹಳ ಸದ್ದು ಮಾಡಿತು ಎಂದು ಹೇಳಬಹುದು.
ಈ ಒಂದು ಘಟನೆಯಿಂದ ರೈತರು ಅದರಲ್ಲಿಯೂ ಯುವಕರು ಮದುವೆಯಾಗಲು ಎದುರಿಸುತ್ತಿರುವಂತಹ ಸಮಸ್ಯೆಗಳ ಬಗ್ಗೆ ಜನಸ್ಪಂದನ ಕಾರ್ಯಕ್ರಮದಲ್ಲಿ ತಿಳಿಸಿದರು ಆದರೆ ಇದೀಗ ಅಂತಹ ರೈತರಿಗೆ ಶುಭ ಸುದ್ದಿಯೊಂದನ್ನು ತಿಳಿಸಲಾಗುತ್ತಿದೆ. ಸದ್ಯ ಇದೀಗ ವಿವಾಹವಾಗಲು ಬಯಸುತ್ತಿರುವಂತಹ ಯುವಕ ಹಾಗೂ ಯುವತಿಯರಿಗೆ ಸಹಾಯವಾಗುವ ಉದ್ದೇಶದಿಂದ ಜೀವನ ಸಂಗಮ ಪೋರ್ಟಲ್ ಎಂಬ ಒಂದು ವಿನೂತನ ವೇದಿಕೆಯನ್ನು ಉತ್ತರ ಕನ್ನಡ ಜಿಲ್ಲಾಡಳಿತವು ಪ್ರಾರಂಭಿಸಿದೆ.
ಈ ಪೋರ್ಟಲ್ ನ ಮೂಲಕ ಹೇಗೆ ಸಂಗಾತಿಯನ್ನು ಹುಡುಕಿ ಕೊಳ್ಳಬಹುದು ಎಂಬುದರ ಸಂಪೂರ್ಣ ಮಾಹಿತಿಯನ್ನು ಇದೀಗ ನೋಡಬಹುದು.
ಜೀವನ ಸಂಗಮ ಪೋರ್ಟಲ್ ನ ವಿಶೇಷತೆಗಳು :
ಅವಿವಾಹಿತ ಯುವಕರಿಗೆ ಈ ಪೋರ್ಟಲ್ ನ ಮೂಲಕ ವಿವಾಹ ವಾಗುವಂತಹ ಭಾಗ್ಯ ಸಿಗಲಿದ್ದು ಹುಡುಗಿ ಸಿಗುತ್ತಿಲ್ಲ ಎಂಬ ಹುಡುಗಿ ಸಿಗುತ್ತಿಲ್ಲ ಎಂಬ ಬೇಸರವನ್ನು ಹುಡುಗಿ ಸಿಗುತ್ತಿಲ್ಲ ಎಂಬ ಮಾಡಿಕೊಳ್ಳುವಂತಹ ಅಗತ್ಯ ಇರುವುದಿಲ್ಲ. ಜಿಲ್ಲಾಡಳಿತದ ಮೂಲಕ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಯುವಕರಿಗೆ ಅದರಲ್ಲಿಯೂ ರೈತರಿಗೆ ಪರಿಹಾರವನ್ನು ನೀಡಲಾಗುತ್ತಿದ್ದು.
ಇದು ಕೇವಲ ರೈತರಿಗಷ್ಟೇ ಅಲ್ಲದೆ ವಿಧವೆಯರಿಗೆ ವಿಕಲಚೇತನರಿಗೆ ಹೆಚ್ಚೈವಿ ಪೀರಿತರಿಗೆ ವಿವಾಹವಾಗಲು ಈ ಒಂದು ಜೀವನ ಸಂಗಮ ವೇದಿಕೆಯು ಸೂಕ್ತ ಪೋರ್ಟಲ್ ಆಗಿದೆ ಎಂದು ಹೇಳಬಹುದು. ಈ ರೀತಿಯಾದಂತಹ ವಿಭಿನ್ನ ಹಾಗೂ ವಿಶೇಷ ಪ್ರಯತ್ನಕ್ಕೆ ಉತ್ತರ ಕನ್ನಡ ಜಿಲ್ಲಾಡಳಿತ ಮುಂದಾಗಿದ್ದು ಈ ಒಂದು ಪೋರ್ಟಲ್ ಪ್ರಾರಂಬಿಸಿರುವುದು ಹಲವು ಯುವಕ ಯುವತಿಯರಿಗೆ ಸಂತಸವನ್ನು ತಂದಿದೆ.
ಇದನ್ನು ಓದಿ : ಸರ್ಕಾರದಿಂದ ಮತ್ತೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಪ್ರಾರಂಭ : ಇಂದೇ ಈ ಕೆಲಸ ಮಾಡಿ
ನೋಂದಣಿ ಮಾಡಲು ಶುಲ್ಕದ ಅಗತ್ಯವಿಲ್ಲ :
ಜೀವನ ಸಂಗಮ ಪೋರ್ಟಲ್ ನಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡುವ ಸಂದರ್ಭದಲ್ಲಿ ಏನೆಲ್ಲ ಮಾಡಬೇಕು ಎಂಬುದರ ಬಗ್ಗೆ ನೋಡುವುದಾದರೆ, ಸಂಬಂಧಗಳನ್ನು ಬಯಸುವಂತಹ ವ್ಯಕ್ತಿಗಳಿಗೆ ಉತ್ತರ ಕನ್ನಡ ಜಿಲ್ಲಾಡಳಿತವು ಪ್ರಾರಂಭಿಸಿರುವಂತಹ ಜೀವನ ಸಂಗಮ ಪೋರ್ಟಲ್ ಅನುಕೂಲಕರವಾಗಿದೆ ಎಂದು ಹೇಳಬಹುದು.
ಈ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸುವಂತಹ ಅರ್ಹರಿಗೆ ಅವರ ವಿವಾಹ ಸಂಬಂಧಗಳಲ್ಲಿ ಗೌರವಾನ್ವಿತ ವಾತಾವರಣ ಹಾಗೂ ಸುರಕ್ಷತೆಯನ್ನು ಈ ಪೋರ್ಟಲ್ ಮೂಲಕ ಕಲ್ಪಿಸಿಕೊಡಲಾಗುತ್ತದೆ. ಈ ಪೋರ್ಟಲ್ ಸೇವೆಯನ್ನು ಪಡೆಯಲು ಬಹಳ ಮುಖ್ಯವಾಗಿ ಬಳಕೆದಾರರು ಯಾವುದೇ ರೀತಿಯ ಶುಲ್ಕವನ್ನು ನೀಡುವಂತಹ ಅಗತ್ಯವಿರುವುದಿಲ್ಲ.
ಈ ಒಂದು ಪೋರ್ಟಲ್ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಹಾಗೂ ಶಿಕ್ಷಣದ ಕೊರತೆ ಮತ್ತು ನಿರುದ್ಯೋಗಿಗಳ ಆಗಿರುವಂತಹ ಯುವಕ ಯುವತಿಯರಿಗೆ ಸೂಕ್ತವಾದಂತಹ ತಮ್ಮ ಜೀವನ ಸಂಗಾತಿಯನ್ನು ಹುಡುಕಿ ಕೊಡುವಂತಹ ಒಂದು ಉತ್ತಮ ವೇದಿಕೆ ಎಂದು ಹೇಳಿದರೆ ತಪ್ಪಾಗಲಾರದು.
ಅಧಿಕೃತ ವೆಬ್ಸೈಟ್ :
ಜೀವನ ಸಂಗಮ ಎಂಬ ಪೋರ್ಟಲ್ ಅನ್ನು ಯುವಕ ಯುವತಿಯರು ಉತ್ತರ ಕನ್ನಡ ಜಿಲ್ಲಾಡಳಿತದ ವೆಬ್ಸೈಟ್ ಆದ https://uttarakannada.nic.in/ ಈ ವೆಬ್ಸೈಟ್ನಲ್ಲಿ ಪ್ರಾರಂಭಿಸಲಾಗಿದೆ. ವ್ಯಕ್ತಿಯ ಹಿನ್ನೆಲೆ ವಾಸಸ್ಥಳ ಕೌಟುಂಬಿಕ ಪರಿಸ್ಥಿತಿ ಉದ್ಯೋಗ ಆತನ ಆದಾಯ ಮಾನಸಿಕ ಮತ್ತು ದೈಹಿಕ ಆರೋಗ್ಯದ ಸ್ಥಿತಿಗತಿಯ ಬಗ್ಗೆ ಅರ್ಜಿಯನ್ನು ಸಲ್ಲಿಸುವಂತಹ ವ್ಯಕ್ತಿಯ ಬಗ್ಗೆ ವಿವಿಧ ಅಧಿಕಾರಿಗಳು ಅವರೇ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ.
ಒಂದು ವೇಳೆ ಆ ವ್ಯಕ್ತಿಗಳು ಅರ್ಹರಾಗಿದ್ದರೆ ಮಾತ್ರ ಆ ವ್ಯಕ್ತಿಗೆ ಸರಿಹೊಂದುವಂತಹ ಸಂಗಾತಿಯನ್ನು ಅಧಿಕಾರಿಗಳು ಹುಡುಕಿ ಕೊಡುತ್ತಾರೆ.
ಅಧಿಕಾರಿಗಳು ಜೀವನ ಸಂಗಮ ಪೋರ್ಟಲ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಅತ್ಯಂತ ಸುರಕ್ಷಿತವಾಗಿ ಇಡುತ್ತಾರೆ.
ಈ ಒಂದು ಪೋಟಲನ್ನು ಕೇವಲ ವಿವಾಹ ಹೊಂದಾಣಿಕೆಯ ಉದ್ದೇಶಕ್ಕಾಗಿ ಮಾತ್ರ ಬಳಸಲಾಗುತ್ತದೆ ವಿವಾಹವಾಗಲು ಸಲ್ಲಿಸುವಂತಹ ಅರ್ಜಿ ಮತ್ತು ಪ್ರೊಫೈಲ್ಗಳನ್ನು ಗ್ರಾಮ ಆಡಳಿತದ ಅಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ಸೇರಿದಂತೆ ಉತ್ತರ ಕನ್ನಡ ಜಿಲ್ಲಾಡಳಿತದ ವಿವಿಧ ಅಧಿಕಾರಿಗಳು ವ್ಯಕ್ತಿಯು ವಾಸವಾಗಿರುವುದರ ಬಗ್ಗೆ ಪರಿಶೀಲಿಸುತ್ತಾರೆ.
ವಿಶೇಷ ಸೂಚನೆ :
ಉತ್ತರ ಕನ್ನಡ ಜಿಲ್ಲೆಯು ಪ್ರಾರಂಭಿಸಿರುವಂತಹ ಜೀವನ ಸಂಗಮ ಪೋರ್ಟಲ್ ಕೇವಲ ಉತ್ತರ ಕನ್ನಡ ಜಿಲ್ಲೆಯ ಸ್ಥಳೀಯ ಅರ್ಹ ಯುವಕ ಯುವತಿಯರಿಗೆ ಮಾತ್ರ ಅನ್ವಯವಾಗಲಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಾಹಿತಿಯ ಪ್ರಕಾರ ತಿಳಿಸಲಾಗಿದೆ. ಈ ಪೋರ್ಟಲ್ಲಿ ನೆಲವು ಜಿಲ್ಲೆಯ ನಿವಾಸಿಗಳಿಗೆ ಮಾತ್ರ ದೊರೆಯಲಿದೆ.
ಒಟ್ಟಾರೆ ಜನಸ್ಪಂದನ ಕಾರ್ಯಕ್ರಮದಲ್ಲಿ ಒಬ್ಬ ರೈತನು ಸಲ್ಲಿಸಿದಂತಹ ಅರ್ಜಿಯ ಅನುಸಾರವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಯುವಕರಿಗೆ ವಿವಾಹ ಮಾಡುವ ಉದ್ದೇಶದಿಂದ ಒಂದು ಹೊಸ ಹಾಗೂ ವಿಭಿನ್ನ ಪ್ರಯತ್ನಕ್ಕೆ ಉತ್ತರ ಕನ್ನಡ ಜಿಲ್ಲಾಡಳಿತ ಮುಂದಾಗಿದ್ದು ಈ ಒಂದು ಹೊಸ ಪ್ರಯತ್ನವೂ ಎಷ್ಟು ಯಶಸ್ವಿಯಾಗಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕು.
ಅದು ಏನೇ ಆದರೂ ಸಹ ಅವಿವಾಹಿತ ಯುವಕ ಯುವತಿಯರಿಗೆ ವಿವಾಹವಾಗಲು ಜೀವನ ಸಂಗಮ ಪೋರ್ಟಲ್ ಉತ್ತರ ಕನ್ನಡ ಜಿಲ್ಲಾಡಳಿತದಲ್ಲಿ ಒಂದು ಹೊಸ ಹೆಜ್ಜೆಯಾಗಲಿದೆ ಎಂದು ಹೇಳಬಹುದು. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಈ ಒಂದು ಯೋಜನೆ ಜಾರಿಯಾಗುತ್ತದೆ.
ಎಂಬುದರ ಬಗ್ಗೆಯೂ ಕಾದು ನೋಡಬೇಕು ಹಾಗಾಗಿ ಉತ್ತರ ಕನ್ನಡ ಜಿಲ್ಲಾಡಳಿತ ಪ್ರಾರಂಭಿಸಿರುವಂತಹ ಜೀವನ ಸಂಗಮ ಪೋರ್ಟಲ್ ನ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- KSRTCಯಲ್ಲಿ 7ನೇ ತರಗತಿ ಪಾಸಾದವರಿಗೆ ಉದ್ಯೋಗವಕಾಶ : ಒಟ್ಟು 13,000 ಹುದ್ದೆಗಳಿಗೆ ಅರ್ಜಿ ಅಹ್ವಾನ
- ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಒಟ್ಟಿಗೆ ಸಿಗಲಿದೆ 4,000 ತಕ್ಷಣ ಈ ಕೆಲಸ ಮಾಡಿ