ನಮಸ್ಕಾರ ಸ್ನೇಹಿತರೆ, ದೇಶದಲ್ಲಿ ಇರುವಂತಹ ಮಹಿಳೆಯರ ಸಬಲೀಕರಣಕ್ಕಾಗಿ ಹಲವಾರು ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ದೇಶದಲ್ಲಿ ಮಹಿಳೆಯರ ಅಭಿವೃದ್ಧಿ ಗೋಸ್ಕರ ಕೇಂದ್ರ ಸರ್ಕಾರವು ಸಾಕಷ್ಟು ಯೋಜನೆಗಳನ್ನು ಈಗಲೂ ಕೂಡ ಜಾರಿಗೆ ತರುತ್ತದೆ.
ಅದರಲ್ಲಿ ಮಹಿಳೆಯರು ತಮ್ಮ ಕಾಲಿನಲ್ಲಿ ನಿಂತುಕೊಳ್ಳಬೇಕೆ ಎನ್ನುವ ಉದ್ದೇಶದಿಂದ ಸ್ವಯಂ ಉದ್ಯೋಗ ಯೋಜನೆಗಳು ಸಾಕಷ್ಟು ಕೇಂದ್ರ ಸರ್ಕಾರದಿಂದ ಜಾರಿಯಾಗಿರುವುದನ್ನು ನೋಡಬಹುದು. ಅಂತಹ ಯೋಜನೆಗಳಲ್ಲಿ ಮಹಿಳೆಯರಿಗಾಗಿ ಜಾರಿಗೆ ತಂದಿರುವಂತಹ ಉಚಿತ ಹೊಲಿಗೆ ಯಂತ್ರ ಯೋಜನೆಯಾಗಿದೆ. ಸದ್ಯ ಇದೀಗ ಮತ್ತೊಮ್ಮೆ ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಕೇಂದ್ರ ಸರ್ಕಾರದ ಉಚಿತ ಹೊಲಿಗೆ ಯಂತ್ರ ಯೋಜನೆ :
ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕೆ ಎನ್ನುವ ಉದ್ದೇಶದಿಂದ ಉಚಿತವಾಗಿ ಹೋಲಿಗೆ ಯಂತ್ರವನ್ನು ವಿತರಣೆ ಮಾಡುವ ಒಂದು ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಒಂದು ಯೋಜನೆಯ ಮೂಲಕ ಸ್ವಂತ ಉದ್ಯಮವನ್ನು ಮಹಿಳೆಯರು ಪ್ರಾರಂಭಿಸಲು 5 ಲಕ್ಷದವರೆಗೆ ಸಾಲವನ್ನು ಕೂಡ ಕೇಂದ್ರ ಸರ್ಕಾರದಿಂದ ಪಡೆದುಕೊಳ್ಳಬಹುದು.
ಈ ಒಂದು ಯೋಜನೆ ಮಹಿಳೆಯರಿಗೆ ಅನುಕೂಲವಾಗುವ ಯೋಜನೆಯಾಗಿದ್ದು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ಸೌಲಭ್ಯವನ್ನು ನೀಡುತ್ತಿದ್ದಾರೆ.
ಈ ಒಂದು ಸೌಲಭ್ಯವನ್ನು ಸಂಘಟಿತ ಕಾರ್ಮಿಕ ವರ್ಗಕ್ಕೆ ಸೇರಿದಂತಹ ಮಹಿಳೆಯರು ಪಡೆದುಕೊಳ್ಳಬಹುದಾಗಿದ್ದು ಉಚಿತವಾಗಿ ಹೊಲಿಗೆ ಯಂತ್ರವನ್ನು ಪಡೆಯಲು ಸರ್ಕಾರದಿಂದ 15000 ರೂಪಾಯಿಗಳವರೆಗೆ ಹಣವನ್ನು ಮಹಿಳೆಯರಿಗೆ ಈ ಒಂದು ಯೋಜನೆಯಲ್ಲಿ ನೀಡಲಾಗುತ್ತದೆ.
ಅರ್ಹತೆಗಳು :
- ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಲೋನ್ ಪಡೆದುಕೊಳ್ಳುವ ಮಹಿಳೆಯರು ಟೈಲರಿಂಗ್ ಕಲಿತಿರಬೇಕಾಗುತ್ತದೆ.
- ಇದರ ಜೊತೆಗೆ ಇದೆ ಫೀಲ್ಡ್ ನಲ್ಲಿ ಸ್ವಂತ ಉದ್ಯಮವನ್ನು ತೆರೆಯುವ ಆಸಕ್ತಿಯನ್ನು ಮಹಿಳೆಯರು ಹೊಂದಿರಬೇಕು.
- ಇದರಿಂದ ಸರ್ಕಾರದಿಂದ ಮಹಿಳೆಯರಿಗೆ 3 ಲಕ್ಷದವರೆಗೆ ಲೋನ್ ಸೌಲಭ್ಯ ನೀಡಲಾಗುತ್ತದೆ.
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಪ್ರಯೋಜನಗಳು :
ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತಹ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ಸಂಬಂಧಿಸಿ ದಂತೆ ಸಾಕಷ್ಟು ಪ್ರಯೋಜನಗಳನ್ನು ಮಹಿಳೆಯರು ಪಡೆದುಕೊಳ್ಳಬಹುದು ಅದರಂತೆ ಯಾವೆಲ್ಲ ಪ್ರಯೋಜನಗಳು ಮಹಿಳೆಯರಿಗೆ ಸಿಗಲಿವೆ ಎಂದು ನೋಡುವುದಾದರೆ,
- ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಉಚಿತ ಹೊಲಿಗೆ ಯಂತ್ರಕ್ಕಾಗಿ ಅರ್ಜಿಯನ್ನು ಸಲ್ಲಿಸಿದಂತಹ ಮಹಿಳೆಯರಿಗೆ ಕೆಲಸಕ್ಕೆ ಸಹಾಯವಾಗುವ ಉದ್ದೇಶದಿಂದ ಹದಿನೈದು ಸಾವಿರ ರೂಪಾಯಿಗಳ ಸಹಾಯವನ್ನು ಯಂತ್ರವನ್ನು ಖರೀದಿ ಮಾಡಲು ನೀಡುತ್ತಾರೆ.
- ಅರ್ಜಿಯನ್ನು ಸಲ್ಲಿಸುವವರಿಗೆ ಒಂದು ವಾರದವರೆಗೆ ಕೌಶಲ್ಯ ತರಬೇತಿಯನ್ನು ಕೂಡ ನೀಡಲಾಗುತ್ತದೆ.
- ತರಬೇತಿಯ ಸಂದರ್ಭದಲ್ಲಿ ಹಾಜರಾಗುವಂತಹ ಮಹಿಳೆಯರಿಗೆ ದಿನಕ್ಕೆ 500 ರೂಪಾಯಿಗಳ ಪೈಪಂಡ್ ಅನ್ನು ಕೂಡ ನೀಡಲಾಗುತ್ತದೆ.
- ಉದ್ಯಮವನ್ನು ಪ್ರಾರಂಭ ಮಾಡಲು ಅತಿ ಕಡಿಮೆ ಬಡ್ಡಿ ದರದಲ್ಲಿ ಮಹಿಳೆಯರಿಗೆ 3 ಲಕ್ಷ ಸಾಲ ನೀಡಲಾಗುತ್ತದೆ.
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಅರ್ಜಿ ಸಲ್ಲಿಸಲು ದಾಖಲೆಗಳು :
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗಿನ ದಾಖಲಾತಿಗಳನ್ನು ಕಡ್ಡಾಯವಾಗಿ ಹೊಂದಿರಬೇಕು.
- ರೇಷನ್ ಕಾರ್ಡ.
- ಜಾತಿ ಪ್ರಮಾಣ ಪತ್ರ.
- ಆದಾಯ ಪ್ರಮಾಣ ಪತ್ರ.
- ಆಧಾರ್ ಕಾರ್ಡ್.
- ಬ್ಯಾಂಕ್ ಪಾಸ್ ಬುಕ್.
- ಫೋನ್ ನಂಬರ್.
- ಪಾಸ್ಪೋರ್ಟ್ ಸೈಜ್ ಫೋಟೋ.
- ವೃತ್ತಿಯ ಲೈಸೆನ್ಸ್.
ಹೀಗೆ ಈ ದಾಖಲೆಗಳನ್ನು ಹೊಂದುವುದರ ಮೂಲಕ ಅಭ್ಯರ್ಥಿಗಳು ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕು ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯಿಂದ ಅಥವಾ ಟೈಲರಿಂಗ್ ಕಲಿತಿರುವಂತಹ ಸಂಸ್ಥೆಯಿಂದ ಸರ್ಟಿಫಿಕೇಟ್ ಅನ್ನು ಅಭ್ಯರ್ಥಿಗಳು ಪಡೆದಿರಬೇಕಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ :
ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತಹ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಉಚಿತ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದೆ. ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. https://pmvishwakarma.gov.in/ಈ ವೆಬ್ ಸೈಟಿಗೆ ಭೇಟಿ ನೀಡಿದ ನಂತರ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಹಂತ ಹಂತವಾಗಿ ಅರ್ಜಿಯನ್ನು ಉಚಿತ ಹೊಲಿಗೆ ಯಂತ್ರಕ್ಕಾಗಿ ಸಲ್ಲಿಸಬಹುದು.
ಒಟ್ಟಾರೆ ಕೇಂದ್ರ ಸರ್ಕಾರವು ಮಹಿಳೆಯರು ಸ್ವಂತ ಉದ್ಯಮವನ್ನು ಪ್ರಾರಂಭಿಸಬೇಕು ಎನ್ನುವ ಉದ್ದೇಶದಿಂದ ಹಲವರು ಯೋಜನೆಗಳನ್ನು ಜಾರಿಗೆ ತರುತ್ತದೆ ಅದರಂತೆ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಉಚಿತಾವಲಿಗೆ ಯಂತ್ರವನ್ನು ನೀಡುತ್ತಿದ್ದು ಈ ಒಂದು ಯೋಜನೆಯ ಮೂಲಕ ಸ್ವಂತ ಉದ್ಯಮವನ್ನು ಪ್ರಾರಂಭಿಸಿ ತಮ್ಮ ವೃತ್ತಿ ಜೀವನವನ್ನು ಟೈಲರಿಂಗ್ ನಲ್ಲಿ ಕಳೆಯಬಹುದಾಗಿದೆ. ಹಾಗಾಗಿ ಟೈಲರಿಂಗ್ ವೃತ್ತಿಯನ್ನು ಪಡೆದಂತಹ ಮಹಿಳೆಯರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.