ನಮಸ್ಕಾರ ಸ್ನೇಹಿತರೇ, ಸರ್ಕಾರಿ ನೌಕರರಿಗೆ ಸಂಬಂಧಿಸಿದಂತೆ ಇವತ್ತಿನ ಲೇಖನದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತಹ ಒಂದು ಹೊಸ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ. ಶೇಕಡ 4ರಷ್ಟು ಕೇಂದ್ರ ಸರ್ಕಾರ ನೌಕರರ ತುಟ್ಟಿ ಭತ್ಯೆಯಲ್ಲಿ ಹೆಚ್ಚಳವನ್ನು ಮಾಡಲಾಗುತ್ತಿದೆ.
ಇದರಿಂದ ಕೇಂದ್ರ ಉದ್ಯೋಗಿಗಳ ತುಟ್ಟಿ ಭತ್ಯೆ ಯಲ್ಲಿ ಯಲ್ಲಿ ಬದಲಾವಣೆಯಾಗಲಿದೆ. ಜನವರಿ ಒಂದರಿಂದ ಜಾರಿಯಾಗಲಿರುವಂತಹ ಪರಿಷ್ಕೃತ ಡಿಎ ವಿವರಗಳನ್ನು ಸ್ಪಷ್ಟಪಡಿಸಲಾಗಿದೆ. 50 ಪ್ರತಿಶತದಷ್ಟು ನೌಕರರು ಡಿಎಯಲ್ಲಿ ಹೆಚ್ಚಳವನ್ನು ಪಡೆಯಲಿದ್ದಾರೆ. ಕೊನೆಗೂ ಕೇಂದ್ರ ನೌಕರರ ಬಹುನಿರೀಕ್ಷಿತವಾದಂತಹ ಹೆಚ್ಚಳದ ಬಗ್ಗೆ ಘೋಷಣೆಯಾಗಿದೆ.
ಡಿಎಯಲ್ಲಿ ಶೇಕಡ ನಾಲ್ಕರಷ್ಟು ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ ಇದರಿಂದ ಕೇಂದ್ರ ಸರ್ಕಾರಿ ನೌಕರರ ಡಿಎ ಶೇಕಡ 50ರಷ್ಟು ಆಗಿದ್ದು ಇದರ ಸಂಪೂರ್ಣ ಮಾಹಿತಿಯನ್ನು ನೋಡುವುದಾದರೆ,
ಕೇಂದ್ರ ನೌಕರರಿಗೆ ಏಳನೇ ವೇತನ ಆಯೋಗ ಜಾರಿ ಆಗಿದೆ ನೋಡಿ :
ಈ ಡಿಎ ಯನ್ನು ಪ್ರತಿ ಆರು ತಿಂಗಳಿಗೊಮ್ಮೆ ಕೇಂದ್ರ ಸರ್ಕಾರ ನೌಕರರಿಗೆ ಹೆಚ್ಚಿಸಲಾಗುತ್ತದೆ ಸದ್ಯ ಇದು ಈಗ ಜನವರಿ ಡಿಎ ಏರಿಕೆಯಾಗಿದ್ದು ಸರ್ಕಾರಿ ನೌಕರರು ಆರು ತಿಂಗಳು ಕಳೆದಿರುವಂತಹ ಜುಲೈ ತಿಂಗಳ ಮತ್ತೊಂದು ಡಿಎ ಏರಿಕೆಯನ್ನು ಎದುರು ನೋಡುತ್ತಿದ್ದಾರೆ ಎಂದು ಹೇಳಬಹುದು.
ಏಳನೇ ವೇತನ ಆಯೋಗದ ಪ್ರಕಾರ ಶೇಕಡ 50ರಷ್ಟು ತಲುಪಿದಂತ ಡಿಎ ಯಿಂದಾಗಿ ಅಸ್ತಿತ್ವದಲ್ಲಿರುವಂತಹ ದರಗಳಿಗಿಂತ ಹಲವು ಭತ್ಯೆಗಳು ಶೇಕಡ 25ಕ್ಕೆ ಸ್ವಯಂ ಆಗಿ ಪರಿಷ್ಕರಣೆ ಗೊಳ್ಳುತ್ತವೆ. ಸಜ್ಜೆ ಇದೀಗ ಜುಲೈ ತಿಂಗಳ ಡಿಎರಿಕೆ ಶೀಘ್ರವೇ ಆಗುವಂತಹ ನಿರೀಕ್ಷೆಯನ್ನು ಸರ್ಕಾರ ತಿಳಿಸಿದ್ದು ಈ ಬಾರಿ ಇರುವಂತಹ ಹಣದುಬ್ಬರದ ಒತ್ತಡದಿಂದಾಗಿ ಕೇಂದ್ರ ಸರ್ಕಾರ ನೌಕರರ ಡಿಎ ಶೇಕಡ ನಾಲ್ಕರ ಬದಲಾಗಿ ಶೇಕಡ 5ರಷ್ಟು ಹೆಚ್ಚಳ ಮಾಡಬಹುದು.
ಇದರಿಂದ ಶೇಕಡ 55 ರಷ್ಟು ಡಿಎ ಪ್ರಮಾಣ ಏರಿಕೆಯಾಗಲಿದೆ ಹಾಗಾಗಿ ಈ ತಿಂಗಳಲ್ಲಿ ಡಿಎ ಶೇಕಡ 50 ಪರ್ಸೆಂಟ್ ನಿಂದ ಶೇಕಡ 55 ರವರೆಗೂ ಏರಿಕೆ ಆಗುವಂತಹ ಎಲ್ಲ ಸಾಧ್ಯತೆಗಳು ಸರ್ಕಾರಿ ನೌಕರರಿಗೆ ಇದೆ ಎಂದು ಹೇಳಬಹುದು.
ಇದನ್ನು ಓದಿ : ಸರ್ಕಾರದಿಂದ ಮತ್ತೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಪ್ರಾರಂಭ : ಇಂದೇ ಈ ಕೆಲಸ ಮಾಡಿ
ಜುಲೈ 2024ರಲ್ಲಿ ಶೇಕಡ 55 ರಷ್ಟು ಡಿಎ ಹೆಚ್ಚಳ :
ಕೇಂದ್ರ ಸರ್ಕಾರವು ಕಳೆದ ಕೆಲವು ವರ್ಷಗಳಿಂದ ಉದ್ಯೋಗಿಗಳ ಡಿಎ ಯನ್ನು ಶೇಕಡ ನಾಲ್ಕರಷ್ಟು ಹೆಚ್ಚಿಸಿದೆ. 2022 ರಲ್ಲಿ ಸರ್ಕಾರಿ ನೌಕರರು ಶೇಕಡ 38 ರಷ್ಟು, 2023 ರಲ್ಲಿ ಶೇಕಡ 42ರಷ್ಟು ಮತ್ತು ಶೇಕಡ 46 ರಷ್ಟು ಡಿಎ ಎಂದು ಪಡೆಯುತ್ತಿದ್ದಾರೆ ಮತ್ತೆ ಇದೀಗ 2024 ರ ಮೊದಲಾರ್ಧದಲ್ಲಿ ಸರ್ಕಾರಿ ನೌಕರರು ಶೇಕಡ 50ರಷ್ಟು ಡಿಎ ಪಡೆಯುತ್ತಿದ್ದಾರೆ.
ಆದರೂ ಅಖಿಲ ಭಾರತ ಸಿಪಿಐ ಸೂಚ್ಯಂಕ ಪ್ರಕಾರ ಸಿದ್ಧಪಡಿಸಿದಂತಹ ಸರ್ಕಾರಿ ನೌಕರರ ಡಿಎಯನ್ನು ಹೆಚ್ಚಿಗೆ ಮಾಡಲು ಅದೇ ಮಾದರಿಯನ್ನು ಅನುಸರಿಸಲು ಸರ್ಕಾರಕ್ಕೆ ನಿರ್ಬಂಧ ವಿರುವುದಿಲ್ಲ. ಜುಲೈ ತಿಂಗಳ ಡಿಎಯನ್ನು ಅಖಿಲ ಭಾರತ ಸಿಪಿಐ ಸೂಚ್ಯಂಕವನ್ನು ಆಧರಿಸಿ ಕೇಂದ್ರ ಸರ್ಕಾರ ಆಗಸ್ಟ್ ಅಂತ್ಯದಲ್ಲಿ ಜುಲೈ ತಿಂಗಳ ಡಿಎ ಯನ್ನು ಬಿಡುಗಡೆ ಮಾಡಲಿದೆ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಡಿಎ ನಲ್ಲಿ ಹೆಚ್ಚಳ ಆಗುವುದರ ಬಗ್ಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರದಿಂದ ಹೆಚ್ಚಿನ ಅವಕಾಶಗಳಿವೆ.
ಆದರೆ ಗರಿಷ್ಠ ಶೇಕಡ 50ರಷ್ಟು 7ನೇ ವೇತನ ಆಯೋಗವು ಸರ್ಕಾರಿ ನೌಕರರಿಗೆ ಏರಿಕೆಯನ್ನು ಮಿತಿಗೊಳಿಸಿದೆ ಈಗ ಉದ್ಯೋಗಿಗಳು ತಮ್ಮ ಮೂಲ ಪಾವತಿಯ ಅರ್ಧದಷ್ಟು ವೇತನವನ್ನು ಹೆಚ್ಚುವರಿಯಾಗಿ ಡಿಎ ಮತ್ತು ಇತರ ಭತ್ಯೆಗಳಲ್ಲಿ. ಆದ್ದರಿಂದ ಡಿಎ ಇಂಕ್ರಿಮೆಂಟ್ ಕುರಿತು ಜುಲೈನಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದು ಸರ್ಕಾರಕ್ಕೆ ತುಂಬಾ ಕಷ್ಟಕರವಾಗಿದೆ.
ಒಟ್ಟಾರೆ ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರ ನೌಕರರಿಗೆ ಜುಲೈ ತಿಂಗಳಿನಲ್ಲಿ ಡಿಎ ಹೆಚ್ಚಳ ಮಾಡಲಿದೆ ಎಂಬುದರ ಬಗ್ಗೆ ಸಾಕಷ್ಟು ಗೊಂದಲಗಳಿದ್ದು ಇದರ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟವಾಗಿ ಘೋಷಣೆ ಹೊರಡಿಸಿದ ನಂತರವೇ ಸರ್ಕಾರಿ ನೌಕರರಿಗೆ ಏನು ಎಂಬುದರ ಅರಿವಾಗಲಿದೆ.
ಹಾಗಾಗಿ ಜುಲೈ ತಿಂಗಳಿನಲ್ಲಿ ಕೇಂದ್ರ ಸರ್ಕಾರ ನೌಕರರದ್ದು ಡಿ ಎ ಹೆಚ್ಚಳವಾಗುತ್ತದೆಯೋ, ಇಲ್ಲವೇ ಎಂಬುದರ ಬಗ್ಗೆ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದ ನಂತರವೇ ತಿಳಿದುಕೊಳ್ಳಬಹುದಾಗಿದೆ. ಕೇಂದ್ರ ಸರ್ಕಾರ ಜುಲೈ ತಿಂಗಳಿನಲ್ಲಿ ತುಟ್ಟಿ ಭತ್ಯೆ ಹೆಚ್ಚಳ ಮಾಡುತ್ತದೆಯೇ ಇಲ್ಲವೇ ಎಂಬುದರ ಕುರಿತು ಆಗಾಗ ಮಾಹಿತಿಗಳನ್ನು ತಿಳಿದುಕೊಳ್ಳಲು ಈ ಲೇಖನದಲ್ಲಿ ತಿಳಿಸಲಾದಂತಹ ಡಿಎ ಹೆಚ್ಚಳದ ಬಗ್ಗೆ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಇದು ಹೆಚ್ಚು ಸರ್ಕಾರಿ ನೌಕರರಿಗೆ ಉಪಯೋಗವಾಗುತ್ತದೆ ಎಂದು ಹೇಳಬಹುದು ಧನ್ಯವಾದಗಳು.
ಇತರೆ ವಿಷಯಗಳು :
- KSRTCಯಲ್ಲಿ 7ನೇ ತರಗತಿ ಪಾಸಾದವರಿಗೆ ಉದ್ಯೋಗವಕಾಶ : ಒಟ್ಟು 13,000 ಹುದ್ದೆಗಳಿಗೆ ಅರ್ಜಿ ಅಹ್ವಾನ
- ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಒಟ್ಟಿಗೆ ಸಿಗಲಿದೆ 4,000 ತಕ್ಷಣ ಈ ಕೆಲಸ ಮಾಡಿ