ನಮಸ್ಕಾರ ಸ್ನೇಹಿತರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಜನರಿಗಾಗಿ ಆಗಾಗ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತೇವೆ. ಅದರಂತೆ ಇದೀಗ ಮಹಾರಾಷ್ಟ್ರದ ರಾಜ್ಯ ಸರ್ಕಾರವು ತನ್ನ ಜನರಿಗೆ ಮತ್ತೊಂದು ಹೊಸ ಯೋಜನೆಯನ್ನು ಘೋಷಣೆ ಮಾಡಿದ್ದು ಈ ಯೋಜನೆಯಡಿಯಲ್ಲಿ ಪ್ರತಿ ಮನೆಗೆ ಒಂದು ವರ್ಷಕ್ಕೆ 3 ಎಲ್ಪಿಜಿ ಉಚಿತವಾಗಿ ಸಿಗಲಿದೆ ಎಂದು ಹೇಳಲಾಗುತ್ತಿದೆ.
ಮಹಾರಾಷ್ಟ್ರ ರಾಜ್ಯ ಸರ್ಕಾರವು ತನ್ನ 2024 25 ನೇ ಸಾಲಿನ ವಾರ್ಷಿಕ ಬಜೆಟ್ ಅನ್ನು ಜೂನ್ 28 2024ರ ಶುಕ್ರವಾರದಂದು ಮಂಡನೆ ಮಾಡಿದೆ. ಮಹಾರಾಷ್ಟ್ರದಲ್ಲಿ ಇರುವಂತಹ ಮೈತ್ರಿ ಸರ್ಕಾರದ ಬಜೆಟ್ ನಲ್ಲೂ ರಾಜ್ಯದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ಭಾರಿ ಸದ್ದು ಮಾಡಿದ್ದಂತಹ ಕಾಂಗ್ರೆಸ್ ಪಕ್ಷವು ತನ್ನ ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರ ಹಿಡಿದಿದೆ ಎಂದು ಹೇಳಬಹುದು.
ಸದ್ಯ ಇದೀಗ ರಾಜ್ಯ ಸರ್ಕಾರ ಮುಂದೆ ಬರುವಂತಹ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜನರ ಮನ ಓಲೈಸುವ ಸಲುವಾಗಿ ಕರ್ನಾಟಕ ಗ್ಯಾರಂಟಿ ಯೋಜನೆ ಮಾದರಿಯ ಕೆಲವು ವಿಶೇಷವಾದ ಯೋಜನೆಗಳನ್ನು ಈ ಬಾರಿ ಜಾರಿಗೆ ತರಲಾಗಿದೆ ಎಂದು ಕೆಲವೊಂದು ಮಾತುಗಳು ಕೇಳಿ ಬರುತ್ತಿವೆ.
ಕರ್ನಾಟಕದಲ್ಲಿ ಇರುವಂತೆ ನಿರುದ್ಯೋಗಿಗಳು ಮಹಿಳೆಯರು ರೈತರು ಗೃಹಣಿಯರು ಹಿರಿಯ ನಾಗರಿಕರು ಹಾಗೂ ಯುವಕರು ಸೇರಿದಂತೆ ಹೀಗೆ ಪ್ರತಿಯೊಂದು ವರ್ಗಕ್ಕೆ ಅನುಕೂಲವಾಗುವಂತಹ ಯೋಜನೆಗಳನ್ನು ಕಾಂಗ್ರೆಸ್ ಪಕ್ಷವು ಘೋಷಣೆ ಮಾಡಿದೆ.
ಮಹಾರಾಷ್ಟ್ರ ಸರ್ಕಾರದ ಬಜೆಟ್ :
ಮಹಾರಾಷ್ಟ್ರ ಸರ್ಕಾರವು 2024 25 ನೇ ಸಾಲಿನ ಬಜೆಟ್ ಅನ್ನು ಶುಕ್ರವಾರ ಜೂನ್ 28 204 ರಂದು ಮಂಡನೆ ಮಾಡಿದ್ದು ಆ ಬಜೆಟ್ ನಲ್ಲಿ ಇದೀಗ ಕೆಲವೊಂದು ವಿಶೇಷ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ.
ಮಹಾರಾಷ್ಟ್ರ ಸರ್ಕಾರದ ಬಜೆಟ್ಟನ್ನು ಮಾನ್ಯ ಡಿಸಿಎಂ ಮತ್ತು ಹಣಕಾಸು ಸಚಿವರಾಗಿರುವಂತಹ ಅಜಿತ್ ಪವರ್ ರವರು ಮಂಡನೆ ಮಾಡಿದ್ದು ಆ ಬಜೆಟ್ ನಲ್ಲಿ ಕೆಲವೊಂದು ವಿಶೇಷ ಯೋಜನೆಗಳನ್ನು ತಿಳಿಸಿದ್ದಾರೆ. ಹಾಗಾದರೆ ಮಹಾರಾಷ್ಟ್ರ ಬಜೆಟ್ ನಲ್ಲಿ ಇರುವಂತಹ ವಿಶೇಷ ಯೋಜನೆಗಳು ಯಾವುವು ಎಂದು ನೋಡುವುದಾದರೆ
ಪ್ರಧಾನ ಮಂತ್ರಿ ಉಜ್ವಲ ಯೋಜನೆ :
ಮಹಾರಾಷ್ಟ್ರ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಗ್ಯಾಸ್ ಕನೆಕ್ಷನ್ ಪಡೆದುಕೊಂಡಂತಹ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ 12 ಸಿಲಿಂಡರ್ಗಳನ್ನು ಪ್ರತಿ ವರ್ಷಕ್ಕೆ ನೀಡುತ್ತಿದ್ದು ಪ್ರತಿ ಸಿಲಿಂಡರ್ ಗೆ ರೂ.300 ಗಳ ಸಬ್ಸಿಡಿ ಹಣವನ್ನು ನೀಡಲಾಗುತ್ತಿತ್ತು.
ಮೂರು ಸಿಲಿಂಡರ್ಗಳ ಹಣ ಉಳಿತಾಯವಾಗಿ ಅದರ ಮೂಲಕ ವಾರ್ಷಿಕವಾಗಿ ಒಟ್ಟರೆ ಸರ್ಕಾರದಿಂದ ಮೂರು ಸಿಲಿಂಡರ್ ಉಚಿತವಾಗಿ ಪಡೆದಂತಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ ಮತ್ತು ಇದು ದೇಶದಾದ್ಯಂತ ಅನ್ವಯವಾಗಿದ್ದು ಇದೀಗ ಮಹಾರಾಷ್ಟ್ರದಲ್ಲಿಯೂ ಕೂಡ ಇದೇ ಯೋಜನೆಯು ಘೋಷಣೆಯಾಗಿದೆ.
ಅನ್ನಪೂರ್ಣ ಯೋಜನೆ :
ಕೇವಲ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಮಾತ್ರವಲ್ಲದೆ ಮುಖ್ಯಮಂತ್ರಿ ಅನ್ನಪೂರ್ಣ ಯೋಜನೆಯ ಅಡಿಯಲ್ಲಿ ಪ್ರತಿ ಕುಟುಂಬಗಳಿಗೂ ಅನ್ವಯವಾಗುವಂತೆ ಒಂದು ಕುಟುಂಬಕ್ಕೆ ವಾರ್ಷಿಕವಾಗಿ ಮೂರು ಉಚಿತ ಸಿಲಿಂಡರ್ ಗಳನ್ನು ವಿತರಣೆ ಮಾಡಲಾಗುವುದು ಎಂದು ಘೋಷಣೆ ಮಾಡಿದೆ.
ಇದರ ಮೂಲಕ ಈ ಯೋಜನೆಯಿಂದ 52 ಲಕ್ಷ ಕುಟುಂಬಗಳಿಗೆ ಲಾಭ ಸಿಗಲಿದೆ ಅದರಲ್ಲಿಯೂ ಐದು ಜನ ಇರುವಂತಹ ಅವಿಭಕ್ತ ಕುಟುಂಬಕ್ಕೆ ಈ ಯೋಜನೆಯ ಹೆಚ್ಚಿನ ಆದ್ಯತೆಯನ್ನು ನೀಡಿದೆ ಎಂದು ಹಣಕಾಸು ಸಚಿವರು ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.
ಮಾಜಿ ಲಡ್ಕಿ ಬೆಹನ್ :
ನಮ್ಮ ಕರ್ನಾಟಕ ಸರ್ಕಾರದಲ್ಲಿ ಜಾರಿಯಾಗಿರುವಂತೆ ಕುಟುಂಬದ ಯಜಮಾನೀಯ ಕುಟುಂಬ ನಿರ್ವಹಣೆಗಾಗಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮನೆ ಯಜಮಾನಿಗೆ ಪ್ರತಿ ತಿಂಗಳು 2000ಗಳ ಹಣವನ್ನು ನೀಡಲಾಗುತ್ತಿತ್ತು. ಅದರಂತೆ ಇದೀಗ ಗೃಹಲಕ್ಷ್ಮಿ ಯೋಜನೆಯನ್ನು ಹೋಲುವಂತೆ ಮಹಾರಾಷ್ಟ್ರ ಸರ್ಕಾರವು ಕೂಡ ಒಂದು ಯೋಜನೆಯನ್ನು ಘೋಷಣೆ ಮಾಡಿದೆ.
21ರಿಂದ ಅರವತ್ತು ವರ್ಷ ವಯೋಮಾನದ ಮಹಾರಾಷ್ಟ್ರದ ಮಹಿಳೆಯರಿಗೆ ಪ್ರತಿ ತಿಂಗಳು 1,500 ಸಹಾಯಧನವನ್ನು ನೀಡುವಂತಹ ಮುಖ್ಯಮಂತ್ರಿ ಮಾಜಿ ಲಡ್ಕಿ ಬೆಹನ್ ಯೋಜನೆಯನ್ನು ಘೋಷಣೆ ಮಾಡಲಾಗಿದ್ದು ಜುಲೈ ತಿಂಗಳಿನಿಂದಲೇ ಈ ಯೋಜನೆ ಅನ್ವಯವಾಗುವಂತೆ ಈ ಯೋಜನೆಯ ಹಣವು ಅರ್ಹ ಮಹಿಳೆಯರ ಖಾತೆಗೆ ತಲುಪಲಿದೆ ಎಂದು ಹಣಕಾಸು ಸಚಿವರು ಬಜೆಟ್ ಭಾಷಣೆ ಮಾಡಿದ್ದು ಭರವಸೆ ನೀಡಿದ್ದಾರೆ.
ಇದನ್ನು ಓದಿ : ಆಭರಣ ಖರೀದಿ ಮಾಡುವವರಿಗೆ ಸಿಹಿ ಸುದ್ದಿ : ಚಿನ್ನದ ಬೆಲೆಯಲ್ಲಿ ಮತ್ತಷ್ಟು ಕುಸಿತ!
ಯುವಕಾರ್ಯ ತರಬೇತಿ ಯೋಜನೆ :
ಕರ್ನಾಟಕ ರಾಜ್ಯದಲ್ಲಿ ಘೋಷಣೆ ಮಾಡಿರುವಂತಹ ಯುವನಿಧಿ ಯೋಜನೆಯ ಮಾದರಿಯಲ್ಲಿಯೇ ಇದೀಗ ಯುವ ಕಾರ್ಯಕರ್ತೆ ಯೋಜನೆಯನ್ನು ನಿರುದ್ಯೋಗಿ ಯುವಕರಿಗೆ ಜಾರಿಗೆ ತಂದಿದ್ದು ಈ ಯೋಜನೆಯ ಅಡಿಯಲ್ಲಿ ಮಹಾರಾಷ್ಟ್ರ ಸರ್ಕಾರವು ಪ್ರತಿ ತಿಂಗಳು ನಿರುದ್ಯೋಗ ಯುವಕರಿಗೆ 10 ಸಾವಿರ ರೂಪಾಯಿಗಳ ಸಹಾಯಧನವನ್ನು ಘೋಷಣೆ ಮಾಡಿದೆ.
ರೈತರಿಗಾಗಿ ಕೆಲವು ವಿಶೇಷ ಯೋಜನೆಗಳು :
ಮಹಾರಾಷ್ಟ್ರ ಸರ್ಕಾರವು ರೈತರಿಗಾಗಿ ಇದೀಗ ಕೆಲವೊಂದು ವಿಶೇಷ ಯೋಜನೆಗಳನ್ನು ಘೋಷಣೆ ಮಾಡಿದ್ದು ಹತ್ತಿ ಹಾಗೂ ಸೋಯಾಬೀನ್ ಬೆಳೆಗಾರರಿಗೆ ಹೆಕ್ಟೆರ್ಗೆ 5,000ಗಳ ಸಹಾಯಧನ ಕೃಷಿ ಪಂಪ್ಸೆಟ್ ಗಳ ವಿದ್ಯುತ್ ಬಿಲ್ ಬಾಕಿ ಮನ್ನಾ ಹೀಗೆ ಕೆಲವೊಂದು ಯೋಜನೆಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ.
85,000ಗಳ ಕೋಟಿ ಸಹಾಯಧನವನ್ನು ಈರುಳ್ಳಿ ಬೆಳೆಗಾರರ ನೆರವಿಗಾಗಿ ಘೋಷಣೆ ಮಾಡಿದ್ದು ರೂಪಾಯಿ 350 ಕ್ವಿಂಟಲ್ ಗೆ ಈರುಳ್ಳಿಯನ್ನು ಖರೀದಿಸುವಂತಹ ಭರವಸೆಯನ್ನು ವಾರ್ಷಿಕ ಯೋಜನ ಪಟ್ಟಿಯಲ್ಲಿ ಮಹಾರಾಷ್ಟ್ರ ಸರ್ಕಾರ ಸೇರಿಸಿದೆ.
ಹೈನುಗಾರಿಕೆಗೆ ಪ್ರೋತ್ಸಾಹ :
ಮಹಾರಾಷ್ಟ್ರ ಸರ್ಕಾರ ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೆಲವೊಂದು ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದೆ. ಹಾಲು ಉತ್ಪಾದಿಸುವ ರೈತರಿಗೆ ಜುಲೈ 1 ರಿಂದ ಜಾರಿಗೆ ಬರುವಂತೆ ಪ್ರತಿ ಲೀಟರ್ಗೆ ಐದು ರೂಪಾಯಿಗಳ ಸಹಾಯಧನವನ್ನು ನೀಡಲಾಗುತ್ತದೆ ಎಂದು ಉಪಮುಖ್ಯಮಂತ್ರಿಗಳು ಮತ್ತು ಹಣಕಾಸಿ ಸಚಿವರಾದ ಅಜಿತ್ ಪವರ್ ರವರು ಬಜೆಟ್ ನಲ್ಲಿ ತಿಳಿಸಿದ್ದಾರೆ.
ತೈಲ ಬೆಲೆಯನ್ನು ಮುಂಬೈ ಠಾಣೆ ನವಿ ಮುಂಬೈಗಳಲ್ಲಿ ಇಳಿಕೆ ಮಾಡಿದ್ದು ಪೆಟ್ರೋಲ್ ಬೆಲೆ ಲೀಟರ್ಗೆ 65 ಪೈಸೆ ತೆರಿಗೆ ಕಡಿತದಿಂದ ಕಡಿಮೆಯಾದರೆ ಎರಡು ರೂಪಾಯಿ ಡೀಸೆಲ್ ಬೆಲೆಯಲ್ಲಿ ಲೀಟರ್ಗೆ ಕಡಿತ ಮಾಡಲಾಗಿದೆ.
ಪಂಡರಾಪುರ ಯಾತ್ರಾತ್ರಿಗಳಿಗೆ 20,000ಗಳ ಸಹಾಯಧನವನ್ನು ನೀಡುವಂತಹ ಯೋಜನೆಯನ್ನು ಕೂಡ ಮಹಾರಾಷ್ಟ್ರ ಸರ್ಕಾರ ಘೋಷಣೆ ಮಾಡಿದೆ. ಹೀಗೆ ಹಲವಾರು ಯೋಜನೆಗಳನ್ನು ಮಹಾರಾಷ್ಟ್ರ ಸರ್ಕಾರವು ತನ್ನ ಬಜೆಟ್ ನಲ್ಲಿ ಮಂಡನೆ ಮಾಡಿದ್ದು ಹೆಚ್ಚಿನ ಪ್ರಯೋಜನಗಳು ಅಲ್ಲಿ ಯ ಪ್ರಜೆಗಳಿಗೆ ಸಿಗಲಿದೆ ಎಂದು ಹೇಳಬಹುದು.
ಒಟ್ಟಾರೆ ಮಹಾರಾಷ್ಟ್ರ ಸರ್ಕಾರವು ಮುಂಬರುವಂತಹ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತನ್ನ 2024 25 ನೇ ಬಜೆಟ್ಟನ್ನು ಮಂಡನೆ ಮಾಡಿದ್ದು ಈ ಬಜೆಟ್ ನಲ್ಲಿ ಹಲವಾರು ಯೋಜನೆಗಳನ್ನು ಕರ್ನಾಟಕ ಮಾದರಿಯಂತೆ ಜಾರಿಗೆ ತರಲಾಗಿದೆ ಎಂದು ಹೇಳಬಹುದು.
ಮುಂದಿನ ದಿನಗಳಲ್ಲಿಯೂ ಕೂಡ ನಮ್ಮ ರಾಜ್ಯದಲ್ಲಿಯೂ ಯಾವ ರೀತಿಯ ಯೋಜನೆಗಳು ಜಾರಿಯಾಗಲಿವೆ ಎಂಬುದರ ಮಾಹಿತಿಯನ್ನು ಈ ಬಜೆಟ್ ನಲ್ಲಿ ನೋಡುವುದರ ಮೂಲಕ ತಿಳಿದುಕೊಳ್ಳಬಹುದಾಗಿದೆ. ಮಹಾರಾಷ್ಟ್ರ ಸರ್ಕಾರದ ಬಜೆಟ್ ನ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ : ಸರ್ಕಾರದಿಂದ 7ನೇ ವೇತನ ಆಯೋಗ ಜಾರಿ !
- ರೈಲ್ವೆ ಇಲಾಖೆ ನೇಮಕಾತಿ : ಅರ್ಜಿ ಸಲ್ಲಿಸಲು ಇಲ್ಲಿದೆ ಡೈರೆಕ್ಟ್ ಲಿಂಕ್