ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ : ಸರ್ಕಾರದಿಂದ 7ನೇ ವೇತನ ಆಯೋಗ ಜಾರಿ !

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಏಳನೇ ವೇತನ ಆಯೋಗ ಯಾವಾಗ ಜಾರಿಯಾಗಲಿದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ರಾಜ್ಯ ಸರ್ಕಾರಿ ನೌಕರರ ಸಾಕಷ್ಟ ದಿನಗಳ ಬೇಡಿಕೆಯಾಗಿರುವಂತಹ ಏಳನೇ ವೇತನ ಆಯೋಗ ಜಾರಿಯಾಗಲು ಇನ್ನೇನು ದಿನಗಳಲ್ಲೇ ಆರಂಭವಾಗಿದ್ದು ಬಹುತೇಕ ಆಯೋಗದ ಶಿಫಾರಸ್ಸುಗಳು ಇದೇ ಜುಲೈ 4ರಂದು ಜಾರಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

The government is preparing to implement the 7th Pay Commission!
The government is preparing to implement the 7th Pay Commission!

ಹಾಗಾದರೆ 7ನೇ ವೇತನ ಆಯೋಗದಲ್ಲಿ ಏನೆಲ್ಲಾ ಅಂಶಗಳು ಇವೆ. ಯಾವ ದಿನಾಂಕದಂದು 7ನೇ ವೇತನ ಆಯೋಗ ಜಾರಿಯಾಗಲಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ರಾಜ್ಯ ಸರ್ಕಾರವು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

7ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಭರವಸೆ :

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಕಳೆದ ಜೂನ್ 20ರಂದು ವಿಧಾನಸೌಧದಲ್ಲಿ ನಡೆದಂತಹ ಸಚಿವ ಸಂಪುಟ ಸಭೆಯಲ್ಲಿ ಕೆಲವೊಂದು ಮಹತ್ವದ ನಿರ್ಣಯಗಳನ್ನು ಏಳನೇ ವೇತನ ಆಯೋಗ ಜಾರಿ ಕುರಿತು ಕೈಗೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ಕೆಲವು ಶಾಸಕರಿಂದ ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಅಪಸ್ವರ ಕೇಳಿ ಬಂದಿತ್ತು ಎಂದು ಹೇಳಲಾಗುತ್ತಿದೆ.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ ಎಸ್ ಷಡಕ್ಷರಿ ಹಾಗೂ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಎಲ್ ಭೈರಪ್ಪ ನೇತೃತ್ವದ ನಿಯೋಗವು ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ 7ನೇ ವೇತನ ಆಯೋಗ ಜಾರಿ ಮಾಡುವಂತೆ ಮನವಿ ಮಾಡಿದರು. ಸಿಎಂ ಸಿದ್ದರಾಮಯ್ಯನವರು ಭರವಸೆ ನೀಡಿದ್ದು ಆ ಸಂದರ್ಭದಲ್ಲಿ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಮತ್ತು ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷರಿಗೆ ಹೇಳಿದ್ದರು.

ರಾಜ್ಯ ಸರ್ಕಾರಿ ನೌಕರರಿಗೆ ಜುಲೈ 4ಕ್ಕೆ ಸಿಹಿ ಸುದ್ದಿ :

ಸರ್ಕಾರಿ ನೌಕರರ ಬೇಡಿಕೆಗಳನ್ನು ಕಳೆದ ಮೂರು ನಾಲ್ಕು ವರ್ಷಗಳಿಂದ ಪ್ರತಿನಿಧಿಸುವಂತಹ ಏಳನೇ ವೇತನ ಆಯೋಗ ಜಾರಿ ಮಾಡುವಂತೆ ಸರ್ಕಾರದ ಮೇಲೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಒತ್ತಡ ಹೇರುತ್ತಲೇ ಬಂದಿದ್ದಾರೆ. ಸರ್ಕಾರ ಈ ಬಗ್ಗೆ ಮೀನ ಮೇಷ ಎಣಿಸುತ್ತಾ ಬಂದಿದ್ದು ಇದೀಗ ತೀವ್ರ ಒತ್ತಡ ಸರ್ಕಾರದ ಮೇಲೆ ಆಗಿರುವ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ಹೇಳನೆ ವೇತನ ಆಯೋಗ ಜಾರಿ ಕುರಿತಂತೆ, ರಾಜ್ಯ ಸರ್ಕಾರ ಗಂಭೀರ ಪ್ರಯತ್ನಕ್ಕೆ ಮುಂದಾಗಿದೆ.

ಕಳೆದ ಜೂನ್ 20ರಂದು ಈ ಸಂಬಂಧವಾಗಿ ನಡೆದಂತಹ ಸಚಿವ ಸಂಪುಟದಲ್ಲಿ ಕೆಲವೊಂದಿಷ್ಟು ನಿರ್ಣಯಗಳನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಇದೀಗ ರಾಜ್ಯ ಸರ್ಕಾರಿ ನೌಕರರಿಗೆ ನಾಲ್ಕಕ್ಕೆ ನಡೆಯಲಿರುವಂತಹ ಸಂಪುಟ ಸಭೆಯಲ್ಲಿ ಸಹಿಸುದ್ದಿ ಖಚಿತ ಎಂದು ಹೇಳಲಾಗುತ್ತಿದೆ.

ನೌಕರರ ಮೂಲವೇತನದಲ್ಲಿ ಏರಿಕೆಯಾಗಲಿದೆ :

ಒಂದು ವೇಳೆ ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ವರದಿಯ ಶಿಫಾರಸ್ಸುಗಳನ್ನು ಯಥಾವತ್ ಜಾರಿ ಮಾಡಿದರೆ 27.5% ಸರ್ಕಾರಿ ನೌಕರರ ಮೂಲವೇತನದಲ್ಲಿ ಹೆಚ್ಚಳವಾಗಲಿದೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಸರ್ಕಾರಿ ನೌಕರರ ಬೇಸಿಕ್ ಸ್ಯಾಲರಿಯಲ್ಲಿ 15,000 ದಿಂದ 27,000ಗಳ ವರೆಗೆ ಏರಿಕೆಯಾಗುವ ಸಂಭವವಿದೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ : ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನಲ್ಲಿ ಖಾಲಿ ಹುದ್ದೆಗಳು : ಅರ್ಜಿ ಸಲ್ಲಿಸಲು ಇಲ್ಲಿದೆ ಡೈರೆಕ್ಟ್ ಲಿಂಕ್

1.2 ಮಿಲಿಯನ್ ನೌಕರರಿಗೆ ಪ್ರಯೋಜನ :

ಕರ್ನಾಟಕ ರಾಜ್ಯದಲ್ಲಿ ಏಳನೇ ವೇತನ ಆಯೋಗ ಜಾರಿಯಾದರೆ ಸುಮಾರು 1.2 ಮಿಲಿಯನ್ ಉದ್ಯೋಗಿಗಳು ಮತ್ತು ಪಿಂಚಣಿ ದಾರರಿಗೆ ರಾಜ್ಯದ್ಯಂತ ಇದರ ಪ್ರಯೋಜನ ಸಿಗಲಿದೆ. ಇದೀಗ ರಾಜ್ಯ ಸರ್ಕಾರ ವರದಿಯ ಬಹುತೇಕ ಶಿಫಾರಸ್ಸುಗಳ ಜಾರಿ ಮಾಡಲಿಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು ಅಂತಿಮ ತೀರ್ಮಾನ ಇದೇ ಜುಲೈ 4 ಕೆ ಹೊರ ಬೀಳಲಿದೆ ಎಂದು ಹೇಳಬಹುದು.

ಒಟ್ಟಾರೆ ರಾಜ್ಯ ಸರ್ಕಾರವು ರಾಜ್ಯ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗ ಜಾರಿ ಮಾಡಲು ನಿರ್ಧರಿಸಿದ್ದು ಈ ಬಗ್ಗೆ ಜುಲೈ 4ರ ಸಚಿವ ಸಂಪುಟ ಸಭೆಯಲ್ಲಿ ಸರಿಯಾದ ತೀರ್ಮಾನ ಸಿಗಲಿದೆ. ಏಳನೇ ವೇತನ ಆಯೋಗ ಜಾರಿಯಾದರೆ ರಾಜ್ಯ ಸರ್ಕಾರಿ ನೌಕರರ ಆರ್ಥಿಕ ಸ್ಥಿತಿಯು ಸ್ವಲ್ಪ ಸುಧಾರಿಸಲಿದೆ ಎಂದು ಹೇಳಬಹುದು.

ಈ ಲೇಖನದಲ್ಲಿ ತಿಳಿಸಲಾದಂತಹ ಏಳನೇ ವೇತನ ಆಯೋಗ ಜಾರಿಯ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರು ಯಾರಾದರೂ ಸರ್ಕಾರಿ ನೌಕರರಾಗಿದ್ದರೆ ಅವರಿಗೆ ಈ ಮಾಹಿತಿಯು ಉಪಯೋಗವಾಗಲಿದೆ ಹಾಗಾಗಿ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Leave a Reply

Your email address will not be published. Required fields are marked *

rtgh