ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ರಾಜ್ಯ ಸರ್ಕಾರವು ಮಹಿಳೆಯರಿಗಾಗಿ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಜಾರಿಗೆ ತಂದಿರುವಂತಹ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಕೆಲವೊಂದು ಅಪ್ಡೇಟ್ ಅನ್ನು ಮಾಡಿ ಇದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ.
ರಾಜ್ಯದಲ್ಲಿರುವಂತಹ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯ ಆಗಲಿ ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 2000 ಹಣವನ್ನು ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡುತ್ತಿವೆ.ಗೃಹ ಲಕ್ಷ್ಮಿ ಯೋಜನೆಯ ಸಂಬಂಧಿಸಿದಂತೆ ಈ ನಾಲ್ಕು ನಿಯಮಗಳನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ.
ಗೃಹಲಕ್ಷ್ಮಿ ಯೋಜನೆಯ ಬಿಗ್ ಅಪ್ಡೇಟ್ :
ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ರಾಜ್ಯ ಸರ್ಕಾರ ಇದುವರೆಗೂ 10 ಕಂತುಗಳ ಹಣವನ್ನು ವರ್ಗಾವಣೆ ಮಾಡಿದೆ. 10 ಕಂತುಗಳನ್ನು ವರ್ಗಾವಣೆ ಮಾಡಿದ್ದರು ಕೂಡ ಸಾಕಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಇದುವರೆಗೂ ಕೂಡ ಯೋಜನೆಯ ಹಣ ಬರುತ್ತಿಲ್ಲ.
ಅಂತಹ ಮಹಿಳೆಯರಿಗೆ ಸರ್ಕಾರ ಹೊಸ 4 ನಿಯಮಗಳನ್ನು ಜಾರಿಗೆ ತಂದಿದ್ದು ಆ ನಿಯಮಗಳನ್ನು ಪಾಲಿಸದೆ ಇದ್ದರೆ ಇನ್ನು ಮುಂದೆಯೂ ಕೂಡ ಯೋಜನೆಗೆ ಸಂಬಂಧಿಸಿ ದಂತೆ ಹಣ ವರ್ಗಾವಣೆಯಾಗುವುದಿಲ್ಲ. ಹಾಗಾದರೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ನಾಲ್ಕು ನಿಯಮಗಳು ಯಾವುವು ಎಂದು ನೋಡುವುದಾದರೆ.
ಇದನ್ನು ಓದಿ : ಇಡೀ ದೇಶಕ್ಕೆ BSNLನಿಂದ ಗುಡ್ ನ್ಯೂಸ್ ರೀಚಾರ್ಜ್ ಬೆಲೆ ಕಡಿಮೆ ಅಂಬಾನಿಗೆ ಶುರುವಾಗಲಿ ನಡುಕ !
E-kyc ಕಡ್ಡಾಯ :
ಯಾರಿಲ್ಲ ಇದುವರೆಗೂ ಕೆವೈಸಿ ಮಾಡಿಸಿಲ್ಲವೋ ಅಂತವರು ಈ ಕೂಡಲೇ ಈಕೆ ವೈಸಿ ಮಾಡಿಸಬೇಕು. ಕೆವೈಸಿ ಮಾಡಿಸಲು ಮಹಿಳೆಯರು ತಮ್ಮ ಹತ್ತಿರದ ಗ್ರಾಮವನ್ ಕರ್ನಾಟಕ ವನ್ ಕೇಂದ್ರಗಳಿಗೆ ಭೇಟಿ ನೀಡಿ ಸುಲಭವಾಗಿ ಕೆವೈಸಿಯನ್ನು ಮಾಡಿಸಬಹುದಾಗಿದೆ.
ಕೆವೈಸಿ ಮಾಡಿಸಲು ಮಹಿಳೆಯರು ತಮ್ಮ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಪಾನ್ ಕಾರ್ಡ್ ಎಲ್ಲಾ ಅಗತ್ಯ ದಾಖಲಾತಿಗಳನ್ನು ಹೊಂದುವುದರ ಮೂಲಕ ಕೆವೈಸಿ ಮಾಡಿಸಬಹುದು. ಒಂದು ವೇಳೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಿದ್ದು ಈಗಾಗಲೇ ಮಹಿಳೆಯರು ಕೆವೈಸಿ ಮಾಡಿಸಿರುವವರು ಮತ್ತೊಮ್ಮೆ ಕೆವೈಸಿ ಮಾಡಿಸುವ ಅಗತ್ಯವಿರುವುದಿಲ್ಲ.
NPCI ಮ್ಯಾಪಿಂಗ್ :
ನಿಮ್ಮ ಆಧಾರ್ ಕಾರ್ಡ್ ಗೆ ನೀವೇನಾದರೂ ಒಂದು ವೇಳೆ ಎನ್‌ಪಿಸಿಐ ಮ್ಯಾಪಿಂಗ್ ಮಾಡಿಸಿಲ್ಲವಿದ್ದರೆ ಈ ಕೂಡಲೇ ಎಂಪಿಸಿಐ ಮಾಡಿಸಬೇಕು. ಯಾವ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಒಂದು ಕಂತಿನ ಹಣವು ಕೂಡ ಬಂದಿಲ್ಲವೋ ಅಂತವರು ನಿರ್ಲಕ್ಷ್ಯ ಮಾಡದೆ ತಮ್ಮ ಆಧಾರ್ ಕಾರ್ಡಿಗೆ ಎಂಸಿಸಿಐ ಬ್ಯಾಟಿಂಗ್ ಮಾಡಿಸುವುದು ಉತ್ತಮವಾಗಿದೆ.
ನೀವೇನಾದರೂ ಈ ಒಂದು ಕೆಲಸವನ್ನು ಮಾಡಿಸಿಲ್ಲದಿದ್ದರೆ ನಿಮ್ಮ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಹಣವು ಕೂಡ ಬರುವುದಿಲ್ಲ ಹಾಗಾಗಿ ನಿಮ್ಮ ಆಧಾರ್ ಕಾರ್ಡ್ ಗೆ ಎನ್ ಸಿ ಪಿ ಐ ಮ್ಯಾಪಿಂಗ್ ಆಗಿದೆಯಾ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳಬೇಕು. ಆಗಿಲ್ಲದಿದ್ದರೆ ಈ ಕೂಡಲೇ ಮಾಡಿಸಿ.
ಬ್ಯಾಂಕ್ ಅಕೌಂಟ್ ಚೆಕ್ ಮಾಡುವುದು :
ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ ನೀವು ಯಾವ ಬ್ಯಾಂಕ್ ಅಕೌಂಟ್ ನೀಡಿರುತ್ತೀರಾ ಆ ಬ್ಯಾಂಕ್ ಅಕೌಂಟ್ ನಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಹಾಗೂ ಆ ಬ್ಯಾಂಕ್ ಅಕೌಂಟ್ ಆಕ್ಟಿವ್ ಇಲ್ಲದಿದ್ದರೆ ಆಗಲೂ ಕೂಡ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಹಣ ವರ್ಗಾವಣೆಯಾಗುವುದಿಲ್ಲ.
ಅಂತಹ ಸಮಯದಲ್ಲಿ ನೀವು ಬೇರೆ ಬ್ಯಾಂಕಿನಲ್ಲಿ ಅಥವಾ ಪೋಸ್ಟ್ ಆಫೀಸ್ನಲ್ಲಿ ಹೊಸದಾಗಿ ಒಂದು ಅಕೌಂಟ್ ಅನ್ನು ಓಪನ್ ಮಾಡಿಸುವುದರ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಆ ಖಾತೆಯನ್ನು ಲಿಂಕ್ ಮಾಡಿಸಬಹುದು. ಇದರಿಂದ ನಿಮ್ಮ ಹೊಸ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಖಂಡಿತವಾಗಿಯೂ ಬರುತ್ತದೆ.
ಬ್ಯಾಂಕ್ ಅಕೌಂಟ್ ಸ್ಟೇಟಸ್ ಚೆಕ್ ಮಾಡುವುದು :
ಸಾಕಷ್ಟು ಮಹಿಳೆಯರ ಬ್ಯಾಂಕ್ ಅಕೌಂಟ್ ಸ್ಟೇಟಸ್ ನಲ್ಲಿ ಸಾಕಷ್ಟು ಸಮಸ್ಯೆಗಳಿವೆ ಹಾಗಾಗಿ ಅಂತವರು ಕೂಡ ತಮ್ಮ ಬ್ಯಾಂಕ್ ಅಕೌಂಟ್ ಅನ್ನು ಚೆಕ್ ಮಾಡಿಸುವುದರ ಮೂಲಕ ಯೋಜನೆಯ ಹಣ ವರ್ಗಾವಣೆಯಾಗುವಂತೆ ಮಾಡಿಕೊಳ್ಳಬಹುದು.
ಬ್ಯಾಂಕ್ ಅಕೌಂಟ್ ಸ್ಟೇಟಸ್ ನಲ್ಲಿ ಸಮಸ್ಯೆ ಇರುವಾಗರಿಂದ ಗೃಹಲಕ್ಷ್ಮಿ ಯೋಜನೆಯ ಹಣ ಪ್ರತಿ ತಿಂಗಳು ಅವರ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತಿಲ್ಲ. ಹಾಗಾಗಿ ಒಂದು ಬಾರಿ ಬ್ಯಾಂಕ್ ಅಕೌಂಟ್ ಸ್ಟೇಟಸ್ ನಿಮ್ಮದು ಸರಿಯಾಗಿ ಇಲ್ಲವೇ ಎಂಬುದನ್ನು ಚೆಕ್ ಮಾಡಿಸಿಕೊಳ್ಳಬೇಕು.
ಒಟ್ಟಾರೆ ಕರ್ನಾಟಕ ಸರ್ಕಾರವು ರಾಜ್ಯದ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯವಾಗಲಿ ಎನ್ನುವ ಉದ್ದೇಶದಿಂದ ಗೃಹಲಕ್ಷ್ಮಿ ಯೋಜನೆ ಅನ್ನ ಭಾಗ್ಯ ಯೋಜನೆ ಹಾಗೂ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಗಳಲ್ಲಿ ಸಾಕಷ್ಟು ಯಶಸ್ವಿಯಾಗಿವೆ ಎಂದು ಹೇಳಬಹುದು. ಅದಷ್ಟೇ ಅಲ್ಲದೆ ಮಹಿಳೆಯರು ಈ ಯೋಜನೆಗಳ ಹಲವಾರು ಪ್ರಯೋಜನಗಳನ್ನು ಪಡೆದುಕೊಂಡು ಇಂದು ಅವರ ಆರ್ಥಿಕ ಸ್ಥಿತಿ ಸುಧಾರಿಸುತ್ತಿದೆ ಎಂದು ಹೇಳಬಹುದು.
ಹೀಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳಲು ಈ ನಾಲ್ಕು ನಿಯಮಗಳನ್ನು ಅನುಸರಿಸುವುದರ ಮೂಲಕ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯ 2ಸಾವಿರ ರೂಪಾಯಿಗಳ ಹಣವನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ ಹಾಗಾಗಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದೆ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಬೆಳೆ ವಿಮೆ ಹಣ ರೈತರ ಬ್ಯಾಂಕ್ ಖಾತೆಗೆ ಜಮಾ : ಮೊಬೈಲ್ ನಲ್ಲಿ ಸ್ಟೇಟಸ್ ಚೆಕ್ ಮಾಡಬಹುದು
- ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ : ಚಿನ್ನ ಖರೀದಿ ಮಾಡಲು ಇದು ಉತ್ತಮ ಸಮಯ